-ಕ್ರಾಸ್ ಚೆಕ್ಕಿಂಗ್ ನಲ್ಲಿ ಸಿಕ್ಕಿ ಹಾಕಿಕೊಳ್ತಾರಾ ಡಿಕೆಶಿ?
ನವದೆಹಲಿ: ಕನಕಪುರದ ಬಂಡೆ , ಟ್ರಬಲ್ ಶೂಟರ್, ಹಂಟರ್ ಅಂತೆಲ್ಲ ಬಿರುದು ಪಡೆದುಕೊಂಡಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅಕ್ಷರ ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳ ವಿಚಾರಣೆ ಸ್ಟೈಲ್ ಗೆ ಬೆಸ್ತು ಬಿದ್ದಿದ್ದಾರೆ. ಇಡಿ ಅಧಿಕಾರಿಗಳು ಕೇಳುತ್ತಿರುವ ಡೈನಾಮೈಟ್ ನಂತಹ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕನಕಪುರದ ಬಂಡೆ ಶೇಕ್ ಆಗುತ್ತಿದೆ ಎನ್ನಲಾಗುತ್ತಿದೆ.
Advertisement
ಕಳೆದ ಶುಕ್ರವಾರ ಮತ್ತು ಶನಿವಾರ ವಿಚಾರಣೆ ನಡೆಸಿದ್ದ ಇಡಿ ಹಬ್ಬದ ದಿನವಾದ ಸೋಮವಾರ ಕೂಡಾ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಿತ್ತು. ಗಣೇಶ ಚತುರ್ಥಿ ಲೆಕ್ಕಿಸದೇ ಹಿರಿಯರಿಗೆ ಎಡೆ ಇಡಬೇಕು ಅನ್ನೋ ಡಿಕೆ ಶಿವಕುಮಾರ್ ಭಾವನಾತ್ಮಕ ಮನವಿಗೂ ಬಗ್ಗದೇ ನಿನ್ನೆ ಇಡೀ ದಿನಾ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ ಕಣ್ಣೀರು ಹಾಕುತ್ತಲೇ ವಿಚಾರಣೆಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಇಂದು ವಿಚಾರಣೆಗಿಂದು ಮುಕ್ತಿ ಸಿಗಬಹುದು ಎಂದು ನಿರೀಕ್ಷೆ ಮಾಡಿದರು. ಆದರೆ ಡಿಕೆಶಿ ನೀರಿಕ್ಷೆ ಹುಸಿಯಾಗಿದ್ದು ನಿನ್ನೆ ಇಡಿ ಡ್ರಿಲ್ ಮಾಡಿ ಮತ್ತೆ ಇಂದು ಕೂಡಾ ಬೆಳಗ್ಗೆ ಹನ್ನೊಂದು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.
Advertisement
Advertisement
ಡಿಕೆಶಿಗೆ ಮತ್ತೊಂದು ಶಾಕ್: ಕನಕಪುರದ ಬಂಡೆ ಮುಂದೆ ಇಡಿ ಅಧಿಕಾರಿಗಳು ಇಡುತ್ತಿರುವ ಡೈನಾಮೈಟ್ ನಂತಹ ಪ್ರಶ್ನೆಗಳಿಗೆ ಡಿಕೆ ಬೆಚ್ಚಿ ಬೀಳುತ್ತಿದ್ದಾರೆ. ಈ ಶಾಕ್ ನಡುವೆ ಡಿಕೆಶಿ ಇಂದು ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಕರಣದ ಮತ್ತೊಬ್ಬ ಆರೋಪಿಗೆ ಇಡಿ ಸಮನ್ಸ್ ನೀಡಿದೆ ಎನ್ನಲಾಗಿದೆ. ಆದರೆ ಯಾರಿಗೆ ಸಮನ್ಸ್ ನೀಡಿದೆ ಎಂದು ಇಡಿ ಗುಟ್ಟು ಬಿಟ್ಟುಕೊಟ್ಟಿಲ್ಲ.
Advertisement
ದೆಹಲಿಯ ನಿವಾಸದಲ್ಲಿ ಸಿಕ್ಕ ಹಣಕ್ಕೂ ಡಿಕೆಶಿಗೂ ಆ ವ್ಯಕ್ತಿಗೂ ಸಂಬಂಧ ಇದೆ ಎನ್ನಲಾಗಿದ್ದು, ಆ ವ್ಯಕ್ತಿ ವಿಚಾರಣೆ ಹಾಜರಾದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ಪರಸ್ಪರ ಇಬ್ಬರು ಆರೋಪಿಗಳನ್ನು ಎದುರು ಬದರು ಕೂರಿಸಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದು, ಎಂಟೂವರೆ ಕೋಟಿ ಹಣ ಬುಡಕ್ಕೆ ಇಡಿ ಅಧಿಕಾರಿಗಳು ಕೈ ಹಾಕಲಿದ್ದಾರಂತೆ. ಹಾಗಾಗಿ ಈ ಪ್ರಕರಣ ನಾಲ್ಕು ದಿನದಲ್ಲ ಎಂಟು ದಿನವೂ ವಿಚಾರಣೆ ನಡೆಯಬಹುದು ಇಡಿ ಮೂಲಗಳಿಂದ ತಿಳಿದು ಬಂದಿದೆ.
ತನ್ನ ಮೂಲಗಳಿಂದ ಮಾಹಿತಿ ಸಂಗ್ರಹಿಸಿರುವ ಇಡಿ ಅಧಿಕಾರಿಗಳು ಡಿಕೆಶಿಯಿಂದ ಕಳೆದ ಮೂರು ದಿನಗಳಿಂದ ಹೇಳಿಕೆ ಪಡೆದುಕೊಂಡಿದೆ. ಈ ಹೇಳಿಕೆಗೂ ದಾಖಲೆಗೂ ಮ್ಯಾಚ್ ಮಾಡಲಿದ್ದು ಇಂದು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಇಡಿ ಕ್ರಾಸ್ ಚೆಕ್ಕಿಂಗ್ ವೇಳೆ ಸಿಕ್ಕಿಹಾಕಿಕೊಳ್ಳಬಹುದು ಒಂದಿಷ್ಟು ಸಾಕ್ಷಿ ಸಿಗಬಹುದು ಎಂದು ಇಡಿ ಪ್ರಯತ್ನ ಮಾಡ್ತಿದೆ ಎನ್ನಲಾಗಿದೆ.
ಇಡಿ ಅಧಿಕಾರಿಗಳ ಸೈಲೆಂಟ್ ಕಿಲ್ಲಿಂಗ್ ಸ್ಟೈಲ್:
ಮೂರು ದಿನಗಳಿಂದ ಬರೋಬ್ಬರಿ 23 ಗಂಟೆ ವಶದಲ್ಲಿಟ್ಟುಕೊಂಡಿದ್ದ ಇಡಿ ಅಧಿಕಾರಿಗಳು ಕೇವಲ ದಿನಕ್ಕೆ ಎರಡು ಮೂರು ಗಂಟೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬಾಕಿ ಸಮಯದಲ್ಲಿ ಸಿಂಗಲ್ ರೂಂ ನಲ್ಲಿ ಕನಕಪುರದ ಬಂಡೆಯನ್ನು ಕೂರಿಸುತ್ತಿದ್ದು ಸದಾ ಕಾರ್ಯಕರ್ತರ ಮಧ್ಯ ಇದ್ದ ಡಿಕೆಗೆ ಇಡಿ ಸೈಲೆಂಟ್ ಕಿಲ್ಲಿಂಗ್ ಸ್ಟೈಲ್ ಫಾಲೋ ಮಾಡುತ್ತಿದೆ. ನಿರಂತರವಾಗಿ ಶಿವಕುಮಾರ್ ನ್ನ ಒಂಟಿಯಾಗಿಸಿ ಅವರನ್ನ ಮಾನಸಿಕವಾಗಿ ಕುಗ್ಗಿಸಿ ಉತ್ತರ ಪಡೆಯುವ ಪ್ರಯತ್ನ ಮಾಡ್ತಿದ್ದೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಯಾವ ಪ್ಲಾನ್ ಕೂಡಾ ವಕೌರ್ಟ್ ಆಗ್ತಿಲ್ಲ ಎನ್ನಲಾಗಿದ್ದು, ಕೇಳಿದಕ್ಕೆ ಉತ್ತರಿಸಿ ಬಾಕಿ ಟೈಂ ನಲ್ಲಿ ಡಿಕೆ ಸೈಲೆಂಟ್ ಮೂಡ್ ಗೆ ಹೋಗ್ತಿದ್ದಾರಂತೆ. ಆದರೆ ಡಿಕೆ ಸ್ಟೈಲ್ ಗೆ ಜಗ್ಗದ ಅಧಿಕಾರಿಗಳ ನಿರಂತರ ವಿಚಾರಣೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ.
ಒಂದು ಕಡೆ ಇಡಿ ಅಧಿಕಾರಿಗಳಿಂದ ಡಿಕೆ ಶಿವಕುಮಾರ್ ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕಾರ್ಯಕರ್ತರ ದಂಡು ಡಿಕೆ ನೋಡಲು ಬರುತ್ತಿದೆ. ನೆಚ್ಚಿನ ನಾಯಕ ಸಂಕಷ್ಟ ಬೇಗ ನಿವಾರಣೆ ಆಗಲಿ ಅಂತಾ ಹಾರೈಸುತ್ತಿದ್ದಾರೆ.