ಚಿಕ್ಕಮಗಳೂರು: ರಾಸಾಯನಿಕ ಬಳಕೆಯಿಂದ ತಯಾರಾದ ಗಣೇಶನಿಂದ ನೀರು ವಿಷಪೂರಿತವಾಗೋದರ ಜೊತೆ ಜಲಚರಗಳಿಗೂ ತೊಂದರೆ ಎಂದು ಮಲೆನಾಡಿನ ಭಕ್ತರೊಬ್ಬರು ರಾಗಿಯನ್ನೇ ಬಳಸಿ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನೇ ಪ್ರತಿಷ್ಠಾಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ವೀರಭದ್ರೇಶ್ವರ ನಗರದ ನಿವಾಸಿಯಾದ ವೇದರಾಜ್ ಭಂಡಾರಿ ಮನೆಯಲ್ಲಿನ ಪೇಪರ್, ಮೈದಾ ಹಿಟ್ಟು ಹಾಗೂ ರಾಗಿ ಕಾಳಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ತಮ್ಮ ಮನೆಯಲ್ಲಿ ಕೂರಿಸಿದ್ದಾರೆ.
Advertisement
Advertisement
ಪ್ರತಿ ವರ್ಷ ಒಂದೊಂದು ರೀತಿಯ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸೋ ವೇದರಾಜ್ ಅವರು ಕಳೆದ ಬಾರಿ ಬಿಟ್ ರೂಟ್ ಗಣೇಶನನ್ನು ತಯಾರಿಸಿದ್ದರು. ಹೀಗೆ ಪ್ರತಿವರ್ಷವೂ ಕೊಬ್ಬರಿ ಬೆಲ್ಲ, ಪೇಪರ್ ಗಣೇಶ ಸೇರಿದಂತೆ ಒಂದೊಂದು ವಿನೂತನ ರೀತಿಯಲ್ಲಿ ಗಣೇಶನನ್ನು ನಿರ್ಮಿಸಿ ಪೂಜೆಸುತ್ತಾ ಬಂದಿದ್ದಾರೆ. ಇವರನ್ನು ನೋಡಿದ ಮೇಲೆ ಮಲೆನಾಡಿನ ಬಹುತೇಕ ಮಂದಿ ಈ ರೀತಿಯ ವಿಭಿನ್ನ ಹಾಗೂ ಪರಿಸರಕ್ಕೆ ಮಾರಕವಾಗದ ಗಣೇಶನನ್ನು ಕೂರಿಸಲು ಮುಂದಾಗಿದ್ದಾರೆ.
Advertisement
ಗಣೇಶ ಚತುರ್ಥಿಯಂದು ಹಲವು ಕಡೆ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆದರೆ ಪಂಜಾಬ್‍ನ ಲೂದಿಯಾನಾದಲ್ಲಿ ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಯಿತ್ತು. ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರು ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಸತತವಾಗಿ ಮೂರನೇ ವರ್ಷ ಚಾಕಲೇಟ್ ಗಣೇಶನನ್ನು ಮಾಡಿ ಪ್ರತಿಷ್ಠಾಪಿಸಿದ್ದಾರೆ. ಈ ಗಣೇಶ ಮೂರ್ತಿಯನ್ನು 20 ಶೇಫ್‍ಗಳು 10 ದಿನದಲ್ಲಿ ತಯಾರಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv