ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಂಪೂರ್ಣ ಪರಿಸರ ಸ್ನೇಹಿ ಗಣಪನ್ನು ನಿರ್ಮಾಣ ಮಾಡಲಾಗಿದೆ. ಪುಟ್ಟೇನಹಳ್ಳಿಯಲ್ಲಿನ ‘ಕೋಕೋನಟ್ ಗಣೇಶ’ ಸದ್ಯ ಎಲ್ಲರ ಮನ ಗೆದ್ದಿದ್ದಾನೆ.
ಪುಟ್ಟೇನಹಳ್ಳಿಯಲ್ಲಿ ಸಂಪೂರ್ಣವಾಗಿ ಸಾವಿರಾರು ತೆಂಗಿನಕಾಯಿ, ಎಳನೀರು ಹಾಗೂ ಟನ್‍ಗಟ್ಟಲೆ ತರಕಾರಿಗಳನ್ನು ಬಳಸಿ ಪರಿಸರ ಸ್ನೇಹಿ ಗಣಪತಿಯನ್ನು ಮಾಡಿ, ಪೂಜಿಸಲಾಗುತ್ತಿದೆ. ಬರೋಬ್ಬರಿ 9 ಸಾವಿರ ತೆಂಗಿನ ಕಾಯಿ, 3 ಸಾವಿರ ಎಳನೀರು, 21 ವಿವಿಧ ಬಗೆಯ 15 ಟನ್‍ನಷ್ಟು ತರಕಾರಿಯನ್ನು ಬಳಸಿ ಈ ಗಣೇಶನನ್ನು ನಿರ್ಮಿಸಲಾಗಿದೆ.
Advertisement
Advertisement
ಕಳೆದ 25 ದಿನಗಳಿಂದ 75 ಜನ ಈ ‘ಕೋಕೋನಟ್ ಗಣೇಶ’ನ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ಮೂರು ದಿನದ ಬಳಿಕ ಈ ಎಲ್ಲಾ ತೆಂಗಿನಕಾಯಿ, ತರಕಾರಿಯನ್ನು ಭಕ್ತರಿಗೆ ಹಂಚಲಾಗುತ್ತದೆ. ಅಂದಹಾಗೆ, ಕಳೆದ ವರ್ಷ ಇಲ್ಲಿ ಕಬ್ಬಿನ ಗಣೇಶನನ್ನು ಕೂರಿಸಲಾಗಿತ್ತು.
Advertisement
ಪರಿಸರಕ್ಕೆ ಹಾನಿ ಆಗುವ ಕೆಮಿಕಲ್, ಬಣ್ಣಗಳನ್ನು ಬಳಸದೆ ಪರಿಸರ ಸ್ನೇಹಿಯಾದ ಗಣೇಶನನ್ನು ಮಾಡಿ, ಪೂಜಿಸಿ ಭಕ್ತಿ ಜೊತೆಗೆ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.