ಬೆಂಗಳೂರು: ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಪಟ್ಟಿಗೆ (Voter ID Scam) ಕನ್ನ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ (Election Commission of India) ಮಹತ್ವದ ನಿರ್ದೇಶನಗಳನ್ನು ನೀಡಿದೆ. ಕಾಂಗ್ರೆಸ್ ನಾಯಕರ ದೂರಿನ ಬಳಿಕ ರಾಜ್ಯ ಚುನಾವಣಾ ಆಯೋಗ (Election Commission of Karnataka) ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೆಲವು ಸೂಚನೆಗಳನ್ನು ರವಾನಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ನಿರ್ದೇಶಿಸಿದೆ.
ವಿವಾದಿತ ಕ್ಷೇತ್ರಗಳಾದ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹಾದೇವಪುರದಲ್ಲಿ ಮತದಾರರ ಪಟ್ಟಿ ಬಗ್ಗೆ ಪರಿಶೀಲನೆ ನಡೆಸಬೇಕು, ಮತದಾರರ ಸೇರ್ಪಡೆ ಮತ್ತು ಕೈ ಬಿಟ್ಟಿರುವ ಬಗ್ಗೆ 100% ಪರಿಶೀಲನೆಗೆ ಒಳಪಡಿಸಬೇಕು, ಈ ಕ್ಷೇತ್ರಗಳಲ್ಲಿ ಡಿಸೆಂಬರ್24 ರವರೆಗೂ ಮತದಾರರ ಪರಿಷ್ಕರಣೆಗೆ ಅವಧಿ ವಿಸ್ತರಿಸಬೇಕು ಎಂದು ಆಯೋಗ ಹೇಳಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಬಿಬಿಎಂಪಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಎಸ್.ರಂಗಪ್ಪ, ಶಿವಾಜಿನಗರ ಚಿಕ್ಕಪೇಟೆ ಕ್ಷೇತ್ರಗಳ ಉಸ್ತುವಾರಿ ಕೆ. ಶ್ರೀನಿವಾಸ್, ಮಹದೇವಪುರ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಉಪ ಆಯುಕ್ತರ ಅಮಾನತಿಗೆ ನಿರ್ದೇಶನ ನೀಡಿದ್ದು ಇಲಾಖೆ ತನಿಖೆಗೆ ನಿರ್ದೇಶಿಸಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ
Advertisement
ECI issues directions to Chief Secretary & CEO Karnataka in case of collection of voter data by a private entity in BBMP area; Period of claims & objections under Special Summary Revision extended till 24.12.22 @PIBBengaluru @DDNewslive @ceo_karnatakahttps://t.co/X7HBEY6Z62
— Spokesperson ECI (@SpokespersonECI) November 25, 2022
Advertisement
ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಬಿಎಂಪಿ ಹೊರಗಿನ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ. ಆರ್.ವಿಶಾಲ್, ಮಹದೇವಪುರ ಕ್ಷೇತ್ರಕ್ಕೆ ಅಜಯ್ ನಾಗಭೂಷಣಗೆ ಜವಾಬ್ದಾರಿ ನೀಡಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆಗಾಗಿ, ಬಿಬಿಎಂಪಿ ಕೇಂದ್ರ ಭಾಗಕ್ಕೆ ಉಜ್ವಲ್ ಘೋಷ್, ಬಿಬಿಎಂಪಿ ಉತ್ತರಕ್ಕೆ ರಾಮಚಂದ್ರನ್ ಆರ್, ಬಿಬಿಎಂಪಿ ದಕ್ಷಿಣಕ್ಕೆ ಪಿ. ರಾಜೇಂದ್ರ ಚೋಳನ್, ಬೆಂಗಳೂರು ನಗರ ಭಾಗದ ಉಸ್ತುವಾರಿಯಾಗಿ ಡಾ.ಎನ್.ಮಂಜುಳಾಗೆ ಜವಾಬ್ದಾರಿ ನೀಡಿದೆ.
Advertisement
Advertisement
ಈ ಎಲ್ಲ ಚಟುವಟಿಕೆಗಳ ಸಮನ್ವಯ ಮತ್ತು ಮೇಲುಸ್ತುವಾರಿಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲನ್ ಬಿಸ್ವಾಸ್ ಅವರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿದೆ. ಇದರ ಜೊತೆಗೆ SSR ಚಟುವಟಿಕೆಗಳಲ್ಲಿ ಮಾನ್ಯತೆ ಹೊಂದಿದ ಪಕ್ಷಗಳ ಪ್ರತಿನಿಧಿಗಳ ಭಾಗಿಯಾಗಿಸಿಕೊಳ್ಳಲು ಸಿಇಓಗಳಿಗೆ ಆಯೋಗ ಸೂಚನೆ ನೀಡಿದೆ. ಇದನ್ನೂ ಓದಿ: ಓಲಾ, ಉಬರ್ ಆಟೋಗಳಿಗೆ ಶೇ.5 ಕಮಿಷನ್ ದರ ನಿಗದಿ