ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವ ಅಥವಾ ಉಂಟುಮಾಡುವ ಯಾವುದೇ ನಿರ್ದಿಷ್ಟ ಆಹಾರವಿಲ್ಲ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಆದರೆ ಅತಿಯಾದ ಆಹಾರ ಸೇವನೆ, ಅಡುಗೆ ವಿಧಾನ, ಕುಡಿತವೂ ಸ್ತನ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗುತ್ತವೆ.
ಸರಿಯಾದ ಆಹಾರ ಕ್ರಮದ ಬಗ್ಗೆ ಜ್ಞಾನ ಇದ್ದು, ಅದನ್ನು ಅನುಸರಿಸಿದರೆ ಸ್ತನ ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸಬಹುದು. ವೈದ್ಯಕೀಯ ಚಿಕಿತ್ಸೆಗಿಂತಲೂ ಈ ಕ್ರಮ ಉತ್ತಮವಾಗಿದೆ. ಕೇವಲ ಆಹಾರ ಕ್ರಮವಷ್ಟೇ ಅಲ್ಲ, ಉತ್ತಮ ಜೀವನಶೈಲಿ ಕೂಡ ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆಗೆ ಸಹಕಾರಿಯಾಗುತ್ತದೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ
Advertisement
Advertisement
1) ಆರೋಗ್ಯಕರ ಆಹಾರ
ವೈದ್ಯರು ಹಣ್ಣುಗಳು, ತರಕಾರಿ ಮತ್ತು ಪ್ರೊಟೀನ್‌ಯುಕ್ತ ಆಹಾರವನ್ನು ಶಿಫಾರಸು ಮಾಡುತ್ತಾರೆ. ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರುವಂತೆ ಸಲಹೆ ನೀಡುತ್ತಾರೆ.
Advertisement
ಸೊಪ್ಪು ಮತ್ತು ಮೆಡಿಟರೇನಿಯನ್ ಆಹಾರಗಳು ಉರಿಯೂತದ ಮತ್ತು ದೇಹದಲ್ಲಿ ಮಾರಣಾಂತಿಕ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಗುಣಲಕ್ಷಣಗಳ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಆಹಾರಗಳು ಮತ್ತು ಹಣ್ಣುಗಳು, ತರಕಾರಿಗಳು, ಆಲಿವ್ ಅಥವಾ ಮೀನಿನ ಎಣ್ಣೆಯಂತಹ ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರಗಳು, ಈಸ್ಟ್ರೊಜೆನ್ ಮತ್ತು ಇನ್ಸುಲಿನ್ ಹಾಗೂ ದೀರ್ಘಕಾಲದ ಉರಿಯೂತ ಉಂಟುಮಾಡುವ ಇತರ ಅಂಶಗಳಂತಹ ಹಾರ್ಮೋನುಗಳನ್ನು ಕಡಿಮೆ ಮಾಡುವ ಮೂಲಕ ರಕ್ಷಣಾತ್ಮಕ ಪಾತ್ರ ನಿರ್ವಹಿಸುತ್ತವೆ.
Advertisement
2) ಆಲ್ಕೋಹಾಲ್ ಸೇವನೆಯಿಂದ ಸ್ತನ ಕ್ಯಾನ್ಸರ್ ಹೆಚ್ಚಳ
ಹೆಚ್ಚು ಆಲ್ಕೋಹಾಲ್ ಸೇವನೆಯಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಮದ್ಯವು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಸ್ತನ ಅಂಗಾಂಶದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಅಮೆರಿಕದ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಅಧ್ಯಯನದ ಪ್ರಕಾರ, ಆಲ್ಕೋಹಾಲ್ ಸೇವಿಸುವವರ ಪೈಕಿ ಹೆಚ್ಚಿನ ಮಂದಿ ಸ್ತನ ಕ್ಯಾನ್ಸರ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು
3) ಈ ಅಡುಗೆ ವಿಧಾನವೂ ಅಪಾಯಕಾರಿ
ಆಹಾರವನ್ನು ಬೇಯಿಸುವ ವಿಧಾನವು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಅಮೆರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಪ್ರಕಾರ, ಮಾಂಸ, ಕೋಳಿ ಅಥವಾ ಮೀನುಗಳನ್ನು ಸುಡುವುದು ಹೆಟೆರೋಸೈಕ್ಲಿಕ್ ಅಮೈನ್‌ಗಳು ಅಥವಾ ಎಚ್‌ಸಿಎಗಳ ರಚನೆಗೆ ಕಾರಣವಾಗಬಹುದು. ಇದರಿಂದ ಕ್ಯಾನ್ಸರ್ ಸಮಸ್ಯೆ ಎದುರಾಗಬಹುದು ಎಂದಿದೆ. ಆಹಾರವನ್ನು ಸುಡುವ ಬದಲು, ಬೇಯಿಸಿ ತಿನ್ನುವುದು ಉತ್ತಮ.
4) ತೂಕ ಹೆಚ್ಚಳದಿಂದ ಸಮಸ್ಯೆ
ಅಧಿಕ ತೂಕವು ನಿಮ್ಮ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಹಲವಾರು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ವಯಸ್ಕರಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ. ದೇಹ ತೂಕ ಹೆಚ್ಚಳದಿಂದ ಕ್ಯಾನ್ಸರ್ ಸಮಸ್ಯೆ ಎದುರಾಗಬಹುದು.
5) ವ್ಯಾಯಾಮದಿಂದ ಸ್ತನ ಕ್ಯಾನ್ಸರ್ ನಿಯಂತ್ರಣ ಸಾಧ್ಯ
ಸ್ತನ ಕ್ಯಾನ್ಸರ್ ನಿಯಂತ್ರಣದಲ್ಲಿಡಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ. ಹೆಚ್ಚಿನ ತೂಕ ಇರುವವರು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಬಹುದು. ಅಧಿಕ ತೂಕದಿಂದ ಬರುವ ಸ್ತನ ಕ್ಯಾನ್ಸರ್ ಅಪಾಯವನ್ನು ವ್ಯಾಯಾಮದ ಮೂಲಕ ನಿಯಂತ್ರಿಸಬಹುದು. ವ್ಯಾಯಾಮದಲ್ಲಿ ಸಕ್ರಿಯರಾಗಿದ್ದರೆ ರಕ್ತದ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗಲು ಸಹಾಯವಾಗುತ್ತದೆ. ಅದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಶೋಧನೆಯ ಪ್ರಕಾರ, ನಿಯಮಿತ ವ್ಯಾಯಾಮವನ್ನು ಮಾಡುವ ಮಹಿಳೆಯರು ಸಕ್ರಿಯವಾಗಿರದ ಮಹಿಳೆಯರಿಗಿಂತ 10-20 ಪ್ರತಿಶತದಷ್ಟು ಕಡಿಮೆ ಸ್ತನ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ.