ಚನಾ ಅಥವಾ ಕಡಲೆಕಾಳು ಉಸ್ಲಿ (Chickpeas Sundal) ಒಂದು ಸುಲಭ ಹಾಗೂ ಆರೋಗ್ಯಕ್ಕೆ ಉತ್ತಮವಾದ ರೆಸಿಪಿಯಾಗಿದೆ. ಬೆಳಗ್ಗಿನ ಉಪಾಹಾರವಾಗಿಯೂ, ಸಂಜೆಯ ತಿಂಡಿಯಾಗಿಯೂ ಸೇವಿಸಬಹುದಾದ ಕಡಲೆಕಾಳು ಉಸ್ಲಿಯನ್ನು ಹಬ್ಬದ ಸಂದರ್ಭದಲ್ಲಿ ನೈವೇದ್ಯವಾಗಿಯೂ ತಯಾರಿಸಬಹುದು. ಕಡಲೆಕಾಳು ಉಸ್ಲಿ ಮಾಡುವ ಸಿಂಪಲ್ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಕಡಲೆಕಾಳು – 2 ಕಪ್
ಅರಿಶಿನ – ಚಿಟಿಕೆ
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ರುಬ್ಬುವುದಕ್ಕೆ:
ಶುಂಠಿ – 1 ಇಂಚು
ಹಸಿರು ಮೆಣಸಿನಕಾಯಿ – 2
ತುರಿದ ತೆಂಗಿನಕಾಯಿ – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಬಿಸಿಬಿಸಿಯಾಗಿ ಅಕ್ಕಿ ಕಡುಬು ಮಾಡಿ ಸವಿಯಿರಿ
Advertisement
Advertisement
ಫ್ರೈ ಮಾಡಲು:
ಎಣ್ಣೆ – 3 ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಕೆಂಪು ಮೆಣಸಿನಕಾಯಿ – 1
ಕರಿಬೇವಿನ ಸೊಪ್ಪು – ಕೆಲವು
ಹಿಂಗ್ – ಚಿಟಿಕೆ
Advertisement
ಮಾಡುವ ವಿಧಾನ:
* ಮೊದಲಿಗೆ ಕಡಲೆಕಾಳನ್ನು ರಾತ್ರಿ ಅಥವಾ 8-9 ಗಂಟೆಗಳ ಕಾಲ ನೆನೆಸಿಡಿ.
* ನೆನೆಸಿದ ಕಡಲೆಕಾಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ, ಉಪ್ಪು ಮತ್ತು ಅರಿಶಿನ ಸೇರಿಸಿ, 3-4 ಸೀಟಿ ಬರುವವರೆಗೆ ಬೇಯಿಸಿ.
* ಮಿಕ್ಸರ್ ಜಾರ್‌ಗೆ ಶುಂಠಿ, ಮೆಣಸಿನಕಾಯಿ ಮತ್ತು ತುರಿದ ತೆಂಗಿನಕಾಯಿಯನ್ನು ಹಾಕಿ, ಒರಟಾದ ಪೇಸ್ಟ್ ತಯಾರಿಸಿ.
* ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿ ಮಾಡಿ ಸಾಸಿವೆಯನ್ನು ಸಿಡಿಸಿ.
* ನಂತರ ಹಿಂಗ್, ಕರಿಬೇವಿನ ಎಲೆಗಳು, ಕೆಂಪು ಮೆಣಸಿನಕಾಯಿ ಮತ್ತು ರುಬ್ಬಿದ ಮಸಾಲೆ ಸೇರಿಸಿ ಮತ್ತು 1-2 ನಿಮಿಷಗಳ ಕಾಲ ಹುರಿಯಿರಿ.
* ಬೇಯಿಸಿದ ಕಡಲೆಕಾಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳವನ್ನು ಮುಚ್ಚಿ, ಕಡಿಮೆ ಉರಿಯಲ್ಲಿ 2-3 ನಿಮಿಷ ಬೇಯಿಸಿ.
* ಈಗ ಉರಿಯನ್ನು ಆಫ್ ಮಾಡಿ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಕಡಲೆಕಾಳಿನ ಉಸ್ಲಿ ತಯಾರಾಗಿದ್ದು, ಬಿಸಿಬಿಸಿಯಾಗಿ ಅಥವಾ ತಣ್ಣಗೂ ಸವಿಯಬಹುದು. ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?