ಎಗ್ ಕೀಮಾ ಮಸಾಲೆಯುಕ್ತ ರುಚಿಕರವಾದ ಅಡುಗೆಯಾಗಿದ್ದು, ಇದನ್ನು ಕೇವಲ 30 ನಿಮಿಷಗಳಲ್ಲಿ ತಯಾರಿಸಬಹುದು. ಅನ್ನ, ಚಪಾತಿ, ಪರೋಟ ಯಾವುದರೊಂದಿಗೂ ಇದು ಸರಿಹೊಂದುತ್ತದೆ. ಚಪಾತಿಗಾಗಿ ಗ್ರೇವಿ ತಯಾರಿಸೋದು ಹೆಚ್ಚು ಟೈಮ್ ತೆಗೆದುಕೊಳ್ಳುತ್ತದೆ. ನಿಮ್ಮಲ್ಲಿ ಹೆಚ್ಚು ಸಮಯ ಇಲ್ಲ ಎಂದರೆ ಎಗ್ ಕೀಮಾವನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು. ಎಗ್ ಕೀಮಾ ಮಾಡೋದು ಹೇಗೆಂದು ನಾವಿಂದು ತಿಳಿಸಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿದ ಮೊಟ್ಟೆ – 2
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – 4 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಕರಿಬೇವಿನ ಸೊಪ್ಪು – ಕೆಲವು
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಖಾರ ಸವೀಬೇಕು ಎನ್ನೋರಿಗೆ ಚಿಕನ್ ಮದ್ರಾಸ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಸೇರಿಸಿ ಈರುಳ್ಳಿ ಮೃದುವಾಗುವವರೆಗೆ ಹುರಿಯಿರಿ.
* ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ.
* ಹೆಚ್ಚಿದ ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿಕೊಳ್ಳಿ.
* ನಂತರ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಉಪ್ಪು, ಕೆಂಪು ಮೆಣಸಿನಪುಡಿ, ಗರಂ ಮಸಾಲೆ ಸೇರಿಸಿ ಮಿಶ್ರಣ ಮಾಡಿ.
* ಮಸಾಲೆ ಸುಡುವುದನ್ನು ತಪ್ಪಿಸಲು ಸ್ವಲ್ಪ ನೀರು ಸೇರಿಸಿ, ಮಸಾಲೆಗಳ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ.
* ಈಗ ಬೇಯಿಸಿದ ಮೊಟ್ಟೆಗಳನ್ನು ಸಣ್ಣದಾಗಿ ಕತ್ತರಿಸಿ, ಮಸಾಲೆಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಎಗ್ ಕೀಮಾ ಚಪಾತಿ, ಅನ್ನದೊಂದಿಗೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್