ಆಯ್ಲಿ ಸ್ಕಿನ್/ ಎಣ್ಣೆ ಚರ್ಮದ ಮುಖ ನಿಮ್ಮದಾಗಿದ್ರೆ ಅದರ ಫಜೀತಿ ಎಂತದ್ದು ಅಂತ ನಿಮಗೆ ಗೊತ್ತೇ ಇರುತ್ತೆ. ಬೆಳಗ್ಗೆ ಎಷ್ಟೇ ಫ್ರೆಶ್ ಆಗಿ ರೆಡಿಯಾದ್ರೂ ಮಧ್ಯಾಹ್ನದ ವೇಳೆಗೆ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಡಲ್ ಆಗಿ ಕಾಣುತ್ತದೆ. ಇದಲ್ಲದೆ ಮೊಡವೆಯ ಸಮಸ್ಯೆಯೂ ಉಂಟಾಗುತ್ತದೆ. ಅದಕ್ಕಾಗಿ ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್‍ಪ್ಯಾಕ್‍ಗಳು ಇಲ್ಲಿವೆ. ಒಮ್ಮೆ ಟ್ರೈ ಮಾಡಿ ನೋಡಿ
Advertisement
1. ಕಡಲೆಹಿಟ್ಟು- ಮೊಸರು – ಕಿತ್ತಳೆ ಸಿಪ್ಪೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಕಪ್‍ಗೆ 1 ಚಮಚ ಕಡಲೆಹಿಟ್ಟು, 1 ಚಮಚ ಕಿತ್ತಲೆ ಸಿಪ್ಪೆಯ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.(ಒಣಗಿದ ಪುಡಿ ಇಲ್ಲವಾದ್ರೆ ಕಿತ್ತಲೆಹಣ್ಣಿನ ರಸ ಅಥವಾ ಹಸಿ ಕಿತ್ತಲೆ ಸಿಪ್ಪೆಯ ಪೇಸ್ಟ್ ಬಳಸಬಹುದು). ಒಮ್ಮೆ ಮುಖವನ್ನ ತೊಳೆದು, ಶುಭ್ರವಾದ ಬಟ್ಟೆಯಿಂದ ನೀರಿನಂಶ ಇಲ್ಲದಂತೆ ಒರೆಸಿ. ನಂತರ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಫೇಸ್‍ಪ್ಯಾಕ್ ಹಚ್ಚಿ 20 ನಿಮಿಷ ರಿಲ್ಯಾಕ್ಸ್ ಮಾಡಿ. ಫೇಸ್‍ಪ್ಯಾಕ್ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದು ರೋಸ್‍ವಾಟರ್ ಹಚ್ಚಿಕೊಳ್ಳಿ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುತ್ತಾ ಬಂದಲ್ಲಿ ವ್ಯತ್ಯಾಸ ಕಾಣುತ್ತದೆ.
Advertisement
Advertisement
2. ಮುಲ್ತಾನಿ ಮಿಟ್ಟಿ
ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಬೇಕಾಗುವಷ್ಟು ರೋಸ್‍ವಾಟರ್ ಬೆರೆಸಿ ಚೆನ್ನಾಗಿ ಕಲಸಿ. ಇದನ್ನ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ ಸಂಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನ ವಾರಕ್ಕೆ ಒಂದು ಬಾರಿ ಮಾಡಬಹುದು.
Advertisement
3. ನಿಂಬೆ ರಸ ಜೇನುತುಪ್ಪ
ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆರಸ ಬೆರೆಸಿ ಫೇಸ್‍ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ.
4. ಪುದೀನಾ
ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಬರೆಸಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ಬಳಿಕ ತೊಳೆಯಿರಿ. ಇದನ್ನ ನಿಯಮಿತವಾಗಿ ಬಳಸಿದ್ರೆ ಮೊಡವೆ ಕಲೆ ಕೂಡ ಕಡಿಮೆಯಾಗುತ್ತದೆ.
5. ಸೌತೇಕಾಯಿ
2 ಚಮಚ ಸೌತೇಕಾಯಿ ರಸಕ್ಕೆ 1 ಚಮಚ ನಿಂಬೆರಸ ಬೆರೆಸಿ ಇದನ್ನ ಹತ್ತಿಯಲ್ಲಿ ತೆಗೆದುಕೊಂದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ಬಳಿಕ ಮುಖ ತೊಳೆಯಿರಿ.