ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿದ್ದೀರಿ. ಭಾನುವಾರದ ಸ್ಪೆಷಲ್ ಎಂದು ಇವತ್ತು ಮನೆಯಲ್ಲಿ ನಾನ್‍ವೆಜ್ ಮಾಡುತ್ತೀರ. ಮೊಟ್ಟೆಯಂತೂ ಎಲ್ಲರ ಮನೆಯಲ್ಲೂ ಇರುತ್ತದೆ. ಚಿಕನ್ ಜೊತೆಗೆ ಮೊಟ್ಟೆ ಇದ್ದರೆ ತುಂಬಾ ಚೆನ್ನಾಗಿರುತ್ತೆ. ಅದರಲ್ಲೂ ಮಕ್ಕಳಿಗೆ ಮೊಟ್ಟೆ ಎಂದರೆ ತುಂಬಾ ಇಷ್ಟ. ಮೊಟ್ಟೆಯಿಂದ ನಾನಾ ರೀತಿಯ ಅಡುಗೆ ಸಹ ಮಾಡಬಹುದು. ಆದ್ದರಿಂದ ಮಕ್ಕಳಿಗೆ ಎಗ್ ಮಸಾಲ ಫ್ರೈ ಮಾಡಿಕೊಡಿ ತುಂಬಾ ಟೇಸ್ಟಿಯಾಗಿರುತ್ತೆ. ಎಗ್ ಮಸಾಲ ಮಾಡುವ ವಿಧಾನ ಇಲ್ಲಿದೆ….
Advertisement
ಬೇಕಾಗುವ ಸಾಮಗ್ರಿಗಳು
1. ಮೊಟ್ಟೆ – 5 (ಬೇಯಿಸಿದ)
2. ಅರಿಶಿಣ – 1/4 ಟೀ ಸ್ಪೂನ್
3. ಖಾರದ ಪುಡಿ – 1/2 ಟೀ ಸ್ಪೂನ್
4. ಗರಂ ಮಸಾಲ – 1/2 ಟೀ ಸ್ಪೂನ್
5. ಪೆಪ್ಪರ್ ಪುಡಿ – 1/4 ಟೀ ಸ್ಪೂನ್
6. ಉಪ್ಪು – ರುಚಿಗೆ ತಕ್ಕಷ್ಟು
7. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಬೇಯಿಸಿದ 5 ಮೊಟ್ಟೆಗಳನ್ನು ಎರಡು ಭಾಗವಾಗಿ ಕಟ್ ಮಾಡಿಕೊಳ್ಳಿ.
* ಈಗ ಸಣ್ಣ ಬೌಲ್‍ನಲ್ಲಿ ಅರಿಶಿಣ, ಖಾರದ ಪುಡಿ, ಗರಂ ಮಸಾಲ, ಪೆಪ್ಪರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ. ನಂತರ ಮೂರು ಚಮಚ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಸ್ಟೌವ್ ಆನ್ ಮಾಡಿ ಪ್ಯಾನ್ ಇಟ್ಟು, ಮೂರು ಚಮಚ ಎಣ್ಣೆ ಹಾಕಿ.
* ಎಣ್ಣೆ ಬಿಸಿಯಾಗುತ್ತಿದ್ದಂತೆ ಕಟ್ ಮಾಡಿಕೊಂಡಿದ್ದ ಎಗ್ ಹಾಕಿ ಎರಡು ಕಡೆ ಬೇಯಿಸಿ (ಎಗ್ ಬ್ರೌನ್ ಕಲರ್ ಬರೋವರೆಗೆ ಒಂದು ನಿಮಿಷ ಫ್ರೈ ಮಾಡಿ)
* ಈಗ ಮಿಕ್ಸ್ ಮಾಡಿದ್ದ ಮಸಾಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ನೀರು ಸಂಪೂರ್ಣವಾಗಿ ಹೀರಿಕೊಳ್ಳುವರೆಗೂ ಫ್ರೈ ಮಾಡಿದರೆ ಎಗ್ ಮಸಾಲ ಫ್ರೈ ಸವಿಯಲು ರೆಡಿ.