#BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

Public TV
3 Min Read
maldives 1

– ಮೋದಿಯನ್ನು ಟೀಕಿಸಿದ್ದ 3 ಸಚಿವರು ಸಸ್ಪೆಂಡ್‌

ನವದೆಹಲಿ/ಮಾಲೆ: #BoycottMaldives ಅಭಿಯಾನ ಯಶಸ್ವಿಯಾಗಿದ್ದು EaseMyTrip ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿದ್ದಕ್ಕೆ ಭಾರತೀಯ ನೆಟ್ಟಿಗರು ಮಾಲ್ಡೀವ್ಸ್‌ ಪ್ರವಾಸವನ್ನು ರದ್ದು ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ EaseMyTrip ಫ್ಲೈಟ್‌ ಬುಕ್ಕಿಂಗ್‌ ರದ್ದು ಮಾಡಿದೆ.

ಭಾರತದ ಆನ್‌ಲೈನ್‌ ಟ್ರಾವೆಲ್‌ ಕಂಪನಿ EaseMyTrip ಸಿಇಒ ನಿಶಾಂತ್‌ ಪಿಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಭಾರತೀಯ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್‌ ಸರ್ಕಾರ (Maldives govt) ಅಮಾನುತು ಮಾಡಿದೆ.  ಮೋದಿ ವಿರುದ್ಧ ಕೀಳು ಅಭಿರುಚಿಯುಳ್ಳ ಹೇಳಿಕೆ ನೀಡಿದ್ದ ಮಾರಿಯಂ ಶಿಯುನಾ, ಮಲ್ಲಾ ಷರೀಫ್‌ ಹಾಗೂ ಮಝೂಂ ಮಜೀದ್ ಅವರನ್ನು ಅಮಾನತು ಮಾಡಲಾಗಿದೆ.  ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್‌ ಟ್ರೆಂಡ್‌

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮಿಜು
ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮಿಜು

ಪ್ರಧಾನಿ ಮೋದಿ ಕುರಿತಾಗಿ ಎರಡು ದೇಶಗಳ ಮಧ್ಯೆ ಬಿಕಟ್ಟು ಸೃಷ್ಟಿಯಾಗಿತ್ತು. ಸ್ವತ: ಮಾಲ್ಡೀವ್ಸ್‌ ಜನರೇ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ನೇತೃತ್ವದ ಸರ್ಕಾರ ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿದೆ.

ಅಮಾನತು ಯಾಕೆ?
ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಸ್ನಾರ್ಕಲಿಂಗ್ ಮಾಡಿ ಅಲ್ಲಿನ ಸಮುದ್ರ ತೀರದ ಫೋಟೋ ಹಾಕಿ ಮಾಲ್ಡೀವ್ಸ್‌ಗೆ ಲಕ್ಷದ್ವೀಪ ಪರ್ಯಾಯ ಪ್ರವಾಸಿ ತಾಣವಾಗಬಹುದು ಎಂಬ ಅಭಿಪ್ರಾಯ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿ ಎಂದು ಕರೆ ನೀಡುವ ಮೂಲಕ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ಹೋಗಬೇಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದರು.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಮಾಲ್ಡೀವ್ಸ್‌ ಸರ್ಕಾರದ ಸಚಿವರು ಲಕ್ಷದ್ವೀಪ ಮತ್ತು ಮೋದಿಯನ್ನು ಟೀಕಿಸಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಿಂದ ಕೆರಳಿದ ನೆಟ್ಟಿಗರು #BoycottMaldives ಅಭಿಯಾನ ಆರಂಭಿಸಿದ್ದರು. ಇದರ ಜೊತೆ #ExploreIndianIslands ಬಳಸಿ ಭಾರತದ ಸುಂದರ ದ್ವೀಪಗಳನ್ನು ಪರಿಚಯ ಮಾಡಿಸುವ ಟ್ರೆಂಡ್‌ ಸೃಷ್ಟಿಸಿದ್ದರು. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಈ ಟ್ರೆಂಡ್‌ ನಿಜವಾಗಿ ಫಲ ನೀಡಲು ಆರಂಭಿಸಿತು. 8 ಸಾವಿರ ಹೋಟೆಲ್‌ ಬುಕ್ಕಿಂಗ್‌, 2,500 ವಿಮಾನ ಪ್ರಯಾಣದ ಟಿಕೆಟ್‌ ರದ್ದು ಮಾಡಿ ಭಾರತೀಯ ಪ್ರವಾಸಿಗರು ಬಿಸಿ ಮುಟ್ಟಿಸಿದ್ದರು. ರದ್ದು ಮಾಡಿದ್ದು ಮಾತ್ರವಲ್ಲದೇ ರದ್ದು ಮಾಡಿದ ಟಿಕೆಟ್‌ ವಿವರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ ಮತ್ತಷ್ಟು ಟ್ರೆಂಡ್‌ ಸೃಷ್ಟಿಸಿದರು. ಇದರ ಮಾಲ್ಡೀವ್ಸ್‌ ಪ್ರವಾಸಿ ವೆಬ್‌ಸೈಟ್‌ಗಳಲ್ಲಿ ಸರ್ಕಾರದ ಸಚಿವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಲ್ಲೆದರ ಪರಿಣಾಮ ಭಾರತೀಯ ಪ್ರವಾಸಿಗರ ಆಕ್ರೋಶಕ್ಕೆ ಮಣಿದ ಮಾಲ್ಡೀವ್ಸ್‌ ಈಗ ಸಚಿವರನ್ನು ಅಮಾನತು ಮಾಡಿದೆ.

ಭಾರತ ವಿರೋಧಿ ಸರ್ಕಾರ:
ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮವೇ ಮುಖ್ಯ ಅದಾಯವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯರು ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಭಾರತದ ಸ್ನೇಹಿತನಾಗಿದ್ದ ಮಾಲ್ಡಿವ್ಸ್‌ನಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದ್ದು ಈಗ ಚೀನಾದತ್ತ ವಾಲಿದೆ. ಹೊಸ ಸರ್ಕಾರ ಅಲ್ಲಿರುವ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಭಾರತಕ್ಕೆ ಸೂಚಿಸಿದೆ.

2021ರಲ್ಲಿ 2.91 ಲಕ್ಷ, 2022ರಲ್ಲಿ 2.41 ಲಕ್ಷ ಮಂದಿ ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್‌ಗೆ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2023ರ ಜೂನ್‌ವರೆಗೆ 1 ಲಕ್ಷ ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.

ಬಿಳಿ ಮರಳು, ಸ್ವಚ್ಛ ಬೀಚ್ ಹಾಗೂ ಹವಳದ ದಂಡೆಗಳು ಹೀಗೆ ಮಾಲ್ಡೀವ್ಸ್‌ ಮತ್ತು ಲಕ್ಷದ್ವೀಪದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಈಗ ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದ್ದು ಭಾರೀ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದಾರೆ. 2021 ರಲ್ಲಿ ಕೇವಲ 4 ಸಾವಿರ ಮಂದಿ ಭೇಟಿ ನೀಡಿದ್ದರೆ 2022ರಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.

 

Share This Article