ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ಇಂದು (ನ.12) ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ (Earthquake) ಅನುಭವವಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
This was a long earthquake !
— Ashneer Grover (@Ashneer_Grover) November 12, 2022
Advertisement
ಇದು ವಾರದಲ್ಲಿ 2ನೇ ಬಾರಿಗೆ ಭೂಕಂಪ ಸಂಭವಿಸಿದೆ. ದೆಹಲಿಯ ನೋಯ್ಡಾ (Noida) ಹಾಗೂ ಗುರುಗ್ರಾಮ್‌ನಲ್ಲಿ (Gurugram) ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ. ಆದರೆ ಭೂಕಂಪನದ ತೀವ್ರತೆಯ ಅಂದಾಜು ತಕ್ಷಣವೇ ತಿಳಿದುಬಂದಿಲ್ಲ. ಇದನ್ನೂ ಓದಿ: ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು
Advertisement
That was a VERY long earthquake! Scary AF!
— Iknoor Kaur (@iknoorkaur) November 12, 2022
Advertisement
ಇದಕ್ಕೂ ಮುನ್ನ ಮಂಗಳವಾರ ನೇಪಾಳದಲ್ಲಿ ಸರಿಸುಮಾರು 6.3 ತೀವ್ರತೆಯಷ್ಟು ಭೂಕಂಪ ಸಂಭವಿಸಿತ್ತು. ಇದರಿಂದ 6 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸ್ಟೋನ್ ತೆಗೆಯುವ ನೆಪದಲ್ಲಿ ರೋಗಿಯ ಕಿಡ್ನಿಯನ್ನೇ ತೆಗೆದ್ರು
Advertisement
ಇದಾದ 2 ಗಂಟೆಯ ನಂತರ ದೆಹಲಿಯಲ್ಲೂ ಪ್ರಬಲ ಭೂಕಂಪನ ಉಂಟಾಗಿತ್ತು. ಸುಮಾರು 10 ಕಿ.ಮೀ ಆಳದ ವರೆಗೆ ಭೂಮಿ ಕಂಪಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Center for Seismology) ತಿಳಿಸಿತ್ತು. ಇದೀಗ 2ನೇ ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.