CinemaCrimeLatestLeading NewsMain PostNational

ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

ಹೈದರಾಬಾದ್: ಕಾರಿನ ರೂಫ್‌ನಲ್ಲಿ ಡೇರ್ ಡೆವಿಲ್ ಸ್ಟಂಟ್ (Car dare Devil Stunt) ಮಾಡಿದ್ದ ನಟ ಪವನ್ ಕಲ್ಯಾಣ್ ವಿರುದ್ಧ ಪೊಲೀಸರು ಕೇಸ್ (Police Case) ದಾಖಲಿಸಿದ್ದಾರೆ. ಅತಿವೇಗದ ಕಾರು ಚಾಲನೆ ಮತ್ತು ಇತರರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದ ಆರೋಪದ ಮೇಲೆ ಪವನ್ ಕಲ್ಯಾಣ್ (Pawan Kalyan) ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಕಳೆದ ವಾರ ಪವನ್ ಕಲ್ಯಾಣ್ ವೇಗವಾಗಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಕುಳಿತಿದ್ದರು. ಅದೇ ಕಾರಿನಲ್ಲಿ ಅಕ್ಕಪಕ್ಕ ಐದಾರು ಜನ ಡೋರ್ ಹಿಡಿದು ನಿಂತಿದ್ದರು. ಈ ವೀಡಿಯೋ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಇದನ್ನೂ ಓದಿ: ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಈ ವೇಳೆ ಬೈಕ್ ಸವಾರನೊಬ್ಬ ನಿಯಂತ್ರಣತಪ್ಪಿ ಬಿದ್ದಿದ್ದಾನೆ ಎಂದು ದೂರುದಾರ ಪಿ.ಶಿವಕುಮಾರ್ ಎಂಬವರು ದೂರು ನೀಡಿದ್ದಾರೆ. ಡೇರ್ ಡೆವಿಲ್ ಸ್ಟಂಟ್‌ನಲ್ಲಿ ಭಾಗಿಯಾಗಿದ್ದ ಪವನ್ ಕಲ್ಯಾಣ್ ಮತ್ತು ಇತರರ ವಿರುದ್ಧ ಪೊಲೀಸ್ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಶಿವಕುಮಾರ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

ಪವನ್ ಕಲ್ಯಾಣ್ ಅವರು ಕಾರಿನ ರೂಫ್‌ನಲ್ಲಿ ಕುಳಿತಿದ್ದರೂ ಚಾಲಕ ಅದನ್ನು ಲೆಕ್ಕಿಸಿದೇ ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ. ಅಲ್ಲದೇ ಇತರ ಬೆಂಗಾವಲು ವಾಹನಗಳೂ ಇದೇ ವೇಗದಲ್ಲಿ ಅವರನ್ನು ಹಿಂಬಾಲಿಸಿದ್ದವು.

ಜನಸೇನಾ ಪಕ್ಷದ (Jana Sena Party) ಅಧ್ಯಕ್ಷರಾಗಿರುವ ಪವನ್ ಕಲ್ಯಾಣ್ ಕಳೆದ ವಾರ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪಟ್ಟಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕಾಗಿ ಮನೆಗಳನ್ನು ಕೆಡವಲಾಗಿದೆ ಎಂಬ ಅರೋಪ ಕೇಳಿ ಬಂದಿದ್ದರಿಂದ ಸ್ಥಳೀಯರನ್ನು ಭೇಟಿ ಮಾಡಲು ತೆರಳಿದ್ದರು.

Live Tv

Leave a Reply

Your email address will not be published. Required fields are marked *

Back to top button