ಮಡಿಕೇರಿ: ಒಂದೆಡೆ ಭಾರೀ ಮಳೆಯಾದರೆ ಇನ್ನೊಂದೆಡೆ ಪದೇ ಪದೇ ಆಗುತ್ತಿರುವ ಭೂಕಂಪನದಿಂದ ಜಿಲ್ಲೆಯ ಜನ ಆರತಂಕಕ್ಕೀಡಾಗಿದ್ದಾರೆ.
ಹೌದು.. ಭಾರೀ ಮಳೆಯ ನಡುವೆಯೇ ಕೊಡಗು ಜಿಲ್ಲೆಯಲ್ಲಿ ಭೂಮಿ ಮತ್ತೆ ಕಂಪಿಸಿದೆ. ಕೊಡಗಿನ ಗಡಿ ಗ್ರಾಮ ಚೆಂಬು ಸುತ್ತ-ಮುತ್ತ ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ 6:24ರ ಸಮಯದಲ್ಲಿ ಜನರಿಗೆ ಈ ಅನುಭವವಾಗಿದೆ. ಇದನ್ನೂ ಓದಿ: ಭಾರೀ ಮಳೆಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧ – ರಾಜ್ಯದ ವಿವಿಧೆಡೆ ಭೂಕುಸಿತ, ಭೂಮಿ ಕಂಪಿಸಿದ ಅನುಭವ
Advertisement
Advertisement
ಶನಿವಾರ ರಾತ್ರಿ ಭೂಮಿಯಿಂದ ಜೋರು ಶಬ್ದ ಕೇಳಿಬಂದಿತ್ತು. ಜೊತೆಗೆ ಇಂದು ಬೆಳಗ್ಗೆ ಕೂಡ ಶಬ್ದದೊಂದಿಗೆ ಭೂಕಂಪನದ ಅನುಭವವಾಗಿದೆ ಎಂದು ಗ್ರಾಂಸ್ಥರು ಮಾಹಿತಿ ನೀಡಿದ್ದಾರೆ. ಈ ಮೂಲಕ ಸರಣಿ ಭೂಕಂಪನವಾಗಿದ್ದ ಗಡಿ ಗ್ರಾಮಗಳಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.
Advertisement
ಗೂನಡ್ಕ, ಕೊಯಿನಾಡಿನಲ್ಲೂ ಭೂಕಂಪವಾದಂತಹ ಅನುಭವವಾಗಿದೆ. ಇದರಿಂದ ಚೆಂಬು ಸುತ್ತಮುತ್ತಲಿನ ತೀವ್ರ ಆತಂಕ್ಕೀಡಾಗಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಈವರೆಗೆ ಒಟ್ಟು 7 ಬಾರಿ ಭೂಕಂಪನ