ನವದೆಹಲಿ: ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು ದೆಹಲಿ (NewDelhi) ಮತ್ತು ನೆರೆಯ ಎನ್‌ಸಿಆರ್ (NCR) ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.
Earthquake of Magnitude:5.9, Occurred on 05-01-2023, 19:55:51 IST, Lat: 36.39 & Long: 70.66, Depth: 200 Km ,Location: 79km S of Fayzabad, Afghanistan for more information Download the BhooKamp App https://t.co/NNNsRSzym0@Ravi_MoES @Dr_Mishra1966 @ndmaindia @Indiametdept pic.twitter.com/Um0iJGWieT
— National Center for Seismology (@NCS_Earthquake) January 5, 2023
Advertisement
ಭಾರತೀಯ ಕಾಲಮಾನ ರಾತ್ರಿ 7:55ಕ್ಕೆ ಅಫ್ಘಾನಿಸ್ತಾನದ (Afghanistan) ಫೈಜಾಬಾದ್‌ನಿಂದ ದಕ್ಷಿಣಕ್ಕೆ 79 ಕಿಮೀ ದೂರದಲ್ಲಿ 200 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದೆ. ಇದನ್ನೂ ಓದಿ: ಏಕದಿನ ಮಾದರಿಯಲ್ಲಿ ಏಷ್ಯಾಕಪ್ 2023 – ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ-ಪಾಕ್
Advertisement
Advertisement
ಈ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ (Jammu And Kashmir), ದೆಹಲಿ ಹಾಗೂ ನೆರೆಯ ಎನ್‌ಸಿಆರ್ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಆತಂಕಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ನಲ್ಲೇ ಹುಡುಗಿ ಮುಂದೆ ಹಸ್ತಮೈಥುನ – ದೂರು ನೀಡಲು ಸಂತ್ರಸ್ತೆ ಹಿಂದೇಟು
Advertisement
ಕಳೆದ ಭಾನುವಾರ (ಜನವರಿ 1) ಮುಂಜಾನೆ ದೆಹಲಿ ಹಾಗೂ ನೆರೆಯ ಪ್ರದೇಶಗಳಲ್ಲಿ 3.8 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಯಾವುದೇ ಹಾನಿಯ ಬಗ್ಗೆ ವರದಿಯಾಗಿರಲಿಲ್ಲ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು (NCS) ತಿಳಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k