– ಭೂಮಿಯಿಂದ ಬಂದ ಶಬ್ಧಕ್ಕೆ ಬೆಚ್ಚಿ ಬಿದ್ದ ಜನ
ಮಡಿಕೇರಿ: ಕೊಡಗು (Kodagu) ಹಾಗೂ ಮೈಸೂರು (Mysuru) ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ, ಬಸವನತ್ತೂರು ಸೇರಿದಂತೆ ಹಲವೆಡೆ ಭೂಕಂಪಿಸಿದ ಅನುಭವವಾಗಿದೆ.
ಬೆಳಿಗ್ಗೆ 6:30ರ ವೇಳೆಗೆ 2 ರಿಂದ 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಪಿರಿಯಾಪಟ್ಟಣ ತಾಲೂಕಿನ ಅಡುಗೂರು ಮತ್ತು ಕಣಗಾಲು ಸುತ್ತಮುತ್ತ ಭಾಗದಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ವಿವಾದ: ತಮ್ಮಂದಿರಿಂದಲೇ ಅಣ್ಣನ ಕೊಲೆ
ಭೂಮಿ ಕಂಪಿಸುವ ವೇಳೆ ಗುಂಡಿಗಳಿರುವ ರಸ್ತೆಯಲ್ಲಿ ಲಾರಿ ಚಲಿಸುವಾಗ ಉಂಟಾಗುವ ಶಬ್ಧದಂತೆ ಸದ್ದು ಉಂಟಾಗಿದೆ. ಕೆಲವೆಡೆ ಡ್ಯಾಂನಲ್ಲಿ ನೀರು ಬಿಟ್ಟಾಗ ಆಗುವ ಶಬ್ಧ ಕೇಳಿದ ಅನುಭವ ಉಂಟಾಗಿದೆ. ಭೂಮಿಯಿಂದ ಬಂದ ವಿಚಿತ್ರ ಶಬ್ಧದಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಬಳಿಕವೂ ಯಶಸ್ವಿ ಆಪರೇಷನ್ – ಮಂಜುನಾಥ್ ಕೆಲಸಕ್ಕೆ ಮೆಚ್ಚುಗೆ