ರಾಮನಗರ: ತಾಲೂಕಿನಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಭಾರೀ ಶಬ್ದಕ್ಕೆ ಜನರು ಆತಂಕಗೊಂಡು ತಮ್ಮ ಮನೆಗಳಿಂದ ಹೊರಗಡೆ ಓಡಿದ್ದಾರೆ.
ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ಇಂದು ಸಂಜೆ 5:40 ಹಾಗೂ 7:15ರ ಸುಮಾರಿಗೆ 2 ಬಾರಿ ಭೂಮಿ ಕಂಪಿಸಿರುವಂತೆ ಅನುಭವವಾಗಿದೆ. ಭಾರೀ ಶಬ್ದ ಕೇಳಿ ಬಂದ ಹಿನ್ನೆಲೆ ಭೂಕಂಪವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಭಯದಿಂದ ಹೆದರಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ರಿಕ್ಟರ್ ಮಾಪನದಲ್ಲಿ ಯಾವುದೇ ಕಂಪನ ದಾಖಲಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ನಿಧನ – ನಾಳೆ ಕರ್ನಾಟಕದಲ್ಲೂ ಶೋಕಾಚರಣೆ
Advertisement
Advertisement
ಇಂದು ಮುಂಜಾನೆಯೂ 5:30ರ ಸುಮಾರಿಗೆ ರಾಮನಗರ ತಾಲೂಕಿನ ಪಾದರಹಳ್ಳಿ ಬಳಿ ಭೂಮಿ ಕಂಪಿಸಿರುವ ಅನುಭವ ಆಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಬೆಳ್ಳಂಬೆಳಗ್ಗೆ 3 ಬಾರಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 299 – ರಾಜ್ಯದಲ್ಲಿ 589 ಹೊಸ ಕೋವಿಡ್ ಕೇಸ್ ದಾಖಲು