ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಾ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಚಾಮರಾಜನಗರ ಡಿವೈಎಸ್ ಪಿ ಜೈಕುಮಾರ್ ಸಾರ್ವಜನಿಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಲ್ಲದೇ ಸಾರ್ವಜನಿಕರ ಮೇಲೆ ಕೈ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಡಿವೈಎಸ್ ಪಿ ತಮ್ಮ ಪ್ರತಾಪ ತೋರಿದ್ದಾರೆ. ಪ್ರತಿಭಟನೆಯನ್ನು ವಿಡಿಯೋ ಮಾಡುತ್ತಿದ್ದ ಸಾರ್ವಜನಿಕರ ಮೊಬೈಲ್ ಕಿತ್ತು ಎಸೆದು ಅವರಿಗೆ ಬಾಯಿಗೆ ಬಂದಂತೆ ಬೈದದ್ದು ಅಲ್ಲದೇ, ಅವರ ಮೇಲೆ ಕೈ ಮಾಡಿದ್ದಾರೆ.
Advertisement
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಾ ಬರುತ್ತಿದ್ರೂ ಸಹ ಪೊಲೀಸರು ಮಾತ್ರ ಒಂದೇಲ್ಲಾ ಒಂದು ಪ್ರಕರಣದಲ್ಲಿ ಹೆಸರಾಗುತ್ತಿದ್ದಾರೆ. ಚಾಮರಾಜನಗರದಲ್ಲಿ ಇಷ್ಟೆಲ್ಲಾ ಆಗುತ್ತಿದ್ರು ಕೂಡ, ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಎನ್ನಿಸಿಕೊಂಡ ಎಸ್ ಪಿ ಧರ್ಮೇಂದ್ರ ಕುಮಾರ್ ಮೀನಾ ಮಾತ್ರ ತನಗೆ ಏನು ತಿಳಿದಿಲ್ಲ ಎಂದು ವರ್ತನೆ ಮಾಡ್ತಾ ಇದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.