– ಇಂದು ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ
ಬೆಂಗಳೂರು: ಕರಾವಳಿಯಲ್ಲಿ ನಡೆದಿರೋ ಕೋಮು ಗಲಭೆ ಸಂಬಂಧ ರಾಜಕೀಯ ಪಕ್ಷಗಳ ನಡುವೆ ಕಚ್ಚಾಟ ನಿಂತಿಲ್ಲ. ಈಗ ತಮ್ಮ ಮತ್ತು ಸಿದ್ದರಾಮಯ್ಯರ ಪುತ್ರ ಶೋಕವನ್ನೇ ಮುಂದಿಟ್ಟುಕೊಂಡು ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ
Advertisement
ಬಂಟ್ವಾಳದಲ್ಲಿ ನಡೆದಿರೋ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಡಿವಿಎಸ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
Advertisement
ನಾವು-ನೀವು ಸಮಾನ ದುಃಖಿಗಳೆಂದು ಒಂದು ಸಂದರ್ಭದಲ್ಲಿ ಹೇಳಿದ್ದೆ. ಮೃತಪಟ್ಟ ಶರತ್ ತಂದೆ ಸ್ಥಾನದಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಳ್ಳಿ. ಶರತ್‍ಗೆ ನ್ಯಾಯ ದೊರಕಿಸಿ. ಶರತ್ ತಂದೆಯ ಮುಖವನ್ನು ನೆನೆಸಿಕೊಂಡರೆ ಸಂಕಟವಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಏನೂ ಅನ್ನಿಸುತ್ತಿಲ್ಲವಾದರೆ ಅದನ್ನು ಯೋಜಿತ ಕೃತ್ಯವೆಂದು ತಿಳಿಯಲಾ ಎಂದು ಪ್ರಶ್ನೆ ಹಾಕಿದ್ದಾರೆ.
Advertisement
ಮಾನ್ಯ @CMofKarnataka ನಾನು ನೀವು ಸಮಾನ ದುಃಖಿಗಳೆಂದು ಒಂದು ಸಂಧರ್ಭದಲ್ಲಿ ಹೇಳಿದ್ದೆ . ಮೃತಪಟ್ಟ ಅರ ಎಸ ಎಸ ಕಾರ್ಯಕರ್ತನ ತಂದೆಯ ಸ್ಥಾನದಲ್ಲಿ ನಿಮ್ಮನ್ನು 1/3
— Sadananda Gowda (@DVSadanandGowda) July 9, 2017
Advertisement
ಮಾನ್ಯ @CMofKarnataka ನಿಮ್ಮನ್ನು ಕಲ್ಪಿಸಿಕ್ಕೊಳ್ಳಿ ಮೃತ ಶರತ್ ಗೆ ನ್ಯಾಯ ದೊರಕಿಸಿ .ಶರತ್ ನ ತಂದೆಯ ಮುಖವನ್ನು ನೆನಸಿಕೊಂಡರೆ ತುಂಬಾ ಸಂಕಟವಾಗುತ್ತಿದೆ .
— Sadananda Gowda (@DVSadanandGowda) July 9, 2017
ಮಾನ್ಯ @CMofKarnataka ನಿಮಗೇನೂ ಅನಿಸುತ್ತಿಲ್ಲವಾದರೆ ಅದನ್ನು ಯೋಜಿತ ಕೃತ್ಯವೆಂದು ತಿಳಿಯಲಾ ?
— Sadananda Gowda (@DVSadanandGowda) July 9, 2017
ಈ ನಡುವೆ ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಗಳ ಜೊತೆ ಇಂದು ಸಭೆ ನಡೆಸಲಿದ್ದಾರೆ. ಕಳೆದ ಒಂದೂವರೆ ತಿಂಗಳಿಂದಲೂ ಮಂಗಳೂರು, ಉಡುಪಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಅನ್ಯಧರ್ಮಗಳ ನಡುವೆ ಮಾರಾಮಾರಿ ನಡೆಯುತ್ತಲೇ ಇದೆ. ನಿಷೇಧಾಜ್ಞೆ ಜಾರಿ ಮಾಡಿದ್ರೂ ಕೂಡ ಮೊನ್ನೆ ಮೊನ್ನೆಯಷ್ಟೇ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಕೊಲೆ ನಡೆಯಿತು. ಬಳಿಕ ಶವಯಾತ್ರೆಯಲ್ಲಿ ಕಲ್ಲು ತೂರಾಟ, ಮತ್ತದೇ ಚಾಕು ಇರಿತ ನಡೆಯುತ್ತಲೇ ಇದೆ. ಇದ್ರಿಂದ ಬೇಸತ್ತಿರೋ ಸಿಎಂ ಖಡಕ್ ಚರ್ಚೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 10 ರಿಂದ 12:30ರ ವರೆಗೂ ಸಭೆ ನಡೆಸಿ ಬಳಿಕ 12:30 ಕ್ಕೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಲಿದ್ದಾರೆ.