ನವದೆಹಲಿ: ರಾಜ್ಯ ಬಿಜೆಪಿಯ (BJP) ಆಂತರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ದೆಹಲಿಗೆ (Delhi) ಆಗಮಿಸಿದ್ದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ (DV Sadananda Gowda) ಅವರಿಗೆ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ. 2 ದಿನಗಳ ಕಾಯುವಿಕೆ ಬಳಿಕ ಡಿವಿಎಸ್ ತೀವ್ರ ನಿರಾಸೆಯೊಂದಿಗೆ ಬೆಂಗಳೂರಿಗೆ (Bengaluru) ಮರಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆ ಉಲ್ಲೇಖಿಸಿ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರಿಗೆ ಡಿವಿ ಸದಾನಂದಗೌಡ ಪತ್ರ ಬರೆದಿದ್ದರು. ಪತ್ರ ಓದಿದ್ದ ಜೆಪಿ ನಡ್ಡಾ ದೆಹಲಿಯಲ್ಲಿ ಬಂದು ಭೇಟಿ ಮಾಡಿ, ಚರ್ಚಿಸಲು ಸೂಚನೆ ನೀಡಿದ್ದರು.
Advertisement
Advertisement
ಜೆಪಿ ನಡ್ಡಾ ಸೂಚನೆ ಹಿನ್ನೆಲೆ ಬುಧವಾರ ದೆಹಲಿಗೆ ಬಂದಿದ್ದ ಡಿವಿಎಸ್, ಜೆಪಿ ನಡ್ಡಾ ಸೇರಿದಂತೆ ಬೇರೆ ಬೇರೆ ನಾಯಕರ ಭೇಟಿಗೆ ಪ್ರಯತ್ನಿಸಿದರು. ಆದರೆ ಪಂಚ ರಾಜ್ಯಗಳ ಚುನಾವಣೆ ಭರದಲ್ಲಿರುವ ವರಿಷ್ಠರು ಭೇಟಿಗೆ ಸಮಯ ನೀಡಿಲ್ಲ. ಜೆಪಿ ನಡ್ಡಾ ಅವರು 2 ದಿನಗಳ ಸಮಯ ನೀಡುವ ಭರವಸೆ ನೀಡಿ ಕಾಯಿಸಿದ್ದರು. ಇದನ್ನೂ ಓದಿ: ನಮ್ಮ ನಾಯಕ ಡಿಕೆಶಿ ಸಿಎಂ ಆಗ್ತಾರೆ, 70 ಶಾಸಕರ ಬೆಂಬಲವಿದೆ: ಶಿವಗಂಗಾ ಬಸವರಾಜ್ ಬಾಂಬ್
Advertisement
Advertisement
2 ದಿನಗಳ ಬಳಿಕ ಭೇಟಿಗೆ ಸಮಯ ನೀಡದ ಹಿನ್ನೆಲೆ ಇಂದು (ಶುಕ್ರವಾರ) ಸದಾನಂದಗೌಡ ಬೆಂಗಳೂರಿಗೆ ಮರಳಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ರಕ್ಷಣಾ ಸಮಿತಿ ಸಭೆಯಲ್ಲಿ ಭಾಗಿಯಾಗಲು ಅವರು ಬೆಂಗಳೂರಿಗೆ ಮರಳಿದ್ದು ಅವರು ಸಮಿತಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಹುಲಿ ಉಗುರು ಕೇಸ್ – ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಆರಗ ಕಿಡಿ
Web Stories