ಚಾಮರಾಜನಗರ: ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಸೋಲಿಗರು ಕಿಲೋಮೀಟರ್ ಗಟ್ಟಲೇ ಅಲೆದಾಡಿ ನೀರು ಹೊತ್ತು ತರುತ್ತಿದ್ದಾರೆ.
ಹನೂರು ತಾಲೂಕಿನ ಉತ್ತೂರು ಗ್ರಾಪಂನ ಕತ್ತೆಕಾಲು ಪೋಡು ಹಾಗೂ ಹಿರಿಹಂಬಲ ಪೋಡುಗಳಲ್ಲಿ ಕಳೆದ 6 ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೊರಿದ್ದು, ಒಂದು ಕಿಮೀ ದೂರದ ಕಾಡುಹಾದಿಯಲ್ಲಿ ಹಳ್ಳದ ನೀರನ್ನು ಜನರು ಹೊತ್ತು ತರುತ್ತಿದ್ದಾರೆ. ಪೋಡಿನಲ್ಲಿ ನೀರು ಎತ್ತುವ ಮೋಟಾರ್ ಸುಟ್ಟು ಹೋಗಿದೆ ಎಂದು ಸಬೂಬು ಹೇಳಿಕೊಂಡು ರಿಪೇರಿ ಮಾಡಿಸದ ಪರಿಣಾಮ ಕಾಡಿನೊಳಗೆ ನಡೆದು ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕಾಲುವೆಗೆ ಬಿದ್ದು 10 ವರ್ಷದ ಮಗು ಸಾವು
Advertisement
Advertisement
ಕಾಡು ಪ್ರಾಣಿಗಳ ಭಯ ಹಾಗೂ ಮಳೆಯಿಂದ ಕೆಸರಿನೊಳಗೆ ನಡೆದು ಹೋಗುವ ಗಿರಿಜನರ ಕಷ್ಟವನ್ನು ಪಂಚಾಯಿತಿ ಅಧಿಕಾರಿಗಳು ಬಗೆಹರಿಸದಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ನೀರನ್ನು ಹೊತ್ತು ತರಲು ಕೂಲಿ ಬಿಟ್ಟು ಜನರು ಹೋಗಬೇಕು. ಈ ಹಿನ್ನೆಲೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕಿದೆ.