ಕೊಲ್ಕತ್ತಾ: ದುರ್ಗಾ ದೇವಿ ರೀತಿ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ಕೊಲ್ಕತ್ತಾದಲ್ಲಿ ಸ್ಥಾಪನೆ ಮಾಡಲಾಗಿದೆ.
ನಿನ್ನೆಯಿಂದ ನವರಾತ್ರಿ ಪೂಜೆ ಪ್ರಾರಂಭವಾಗಿದೆ. ಈ ನಡುವೆ ಕೋಲ್ಕಾತ್ತಾದಲ್ಲಿ ದುರ್ಗಾ ಪೂಜೆಗೆ ತೃಣಮೂಲ ಕಾಂಗ್ರೆಸ್ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ದೇವತೆಯ ವಿಗ್ರಹದಂತೆ ಸ್ಥಾಪಿಸಿದ್ದು, ಅವರನ್ನು ದುರ್ಗಾ ದೇವಿಯಂತೆ ಚಿತ್ರಿಸಲಾಗಿದೆ. ವಿಗ್ರಹದ ಪ್ರತಿಯೊಂದು ಬಿಂಬವು ಅವರ ಸರ್ಕಾರದ ಪ್ರತಿ ಅಂಶವನ್ನು ಪ್ರತಿನಿಧಿಸುತ್ತದೆ ಎಂದು ಬಾಗುಯತಿ ನಜರುಲ್ ಪಾರ್ಕ್ ಉನ್ನಯನ ಸಮಿತಿಯ ಅಧ್ಯಕ್ಷ ಇಂದ್ರನಾಥ್ ಬಾಗಿ ಹೇಳಿದರು. ಇದನ್ನೂ ಓದಿ: ಥ್ರೋಬ್ಯಾಕ್ ವೀಡಿಯೋ ಎಂದು ವೈರಲ್ ವೀಡಿಯೋ ಶೇರ್ ಮಾಡಿದ ಡಿಡಬ್ಲ್ಯೂಆರ್
Advertisement
Advertisement
ಈ ವಿಗ್ರಹವನ್ನು ನೋಡಿದರೆ, ಮಮತಾ ಬ್ಯಾನರ್ಜಿ ಅವರಂತೆ ನೀಲಿ ಹಂಚು ಮತ್ತು ಬಿಳಿ ಸೀರೆಯನ್ನು ಉಟ್ಟು ನಮಸ್ಕರಿಸಿ ನಿಂತಿದ್ದಾರೆ. ಇನ್ನೂ ಅವರ ಹಿಂದೆ ಇರುವ ಎಂಟು ಕೈಗಳು, ಅವರ ಸರ್ಕಾರದಲ್ಲಿ ಕೈಗೊಂಡಿದ್ದ ಯೋಜನೆಗಳು ಮತ್ತು ಸಾಧನೆಯನ್ನು ಪ್ರತಿನಿಧಿಸುತ್ತದೆ. ಇವರು ಬರೆದಿರುವ ಸಾಧನೆಯ ಲಿಪಿಯು ಉಪಭಾಷೆ ಬಂಗಾಳಿಯಲ್ಲಿದೆ.
Advertisement
ಈ ಚಿತ್ರದ ಹಿಂದೆ ವಿಶ್ವ ಭೂಪಟವಿದ್ದು, ಇದು ಬ್ಯಾನರ್ಜಿ ಅವರ ಸಾಧನೆಯನ್ನು ಪ್ರತಿಬಿಂಬಿಸುತ್ತೆ. ಬ್ಯಾನರ್ಜಿ ಅವರು ಕಳೆದ ಸಮಯ, ಸ್ಥಳ ಮತ್ತು ಇತರ ಎಲ್ಲ ಅಂಶಗಳನ್ನು ಚಿತ್ರಿಸಲಾಗಿದೆ. ಈ ಹಿನ್ನೆಲೆ ವಾಸ್ತವದ ಬಗ್ಗೆ ಹೆಚ್ಚು ಮಾತನಾಡುತ್ತದೆ. ಇದನ್ನೂ ಓದಿ: ಹಣೆಗೆ ಗುಂಡು ಹಾರಿಸಿಕೊಂಡು 71 ವರ್ಷದ ವೃದ್ಧ ಸಾವು
Advertisement
ಇತ್ತೀಚೆಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭವಾನಿಪುರ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪ್ರಿಯಾಂಕಾ ಅವರನ್ನು ಸೋಲಿಸಿ ಗೆದ್ದಿದ್ದಾರೆ. ಇವರ ಚುನಾವಣಾ ಪ್ರಣಾಳಿಕೆಯಲ್ಲಿ, 25-60 ವರ್ಷ ವಯಸ್ಸಿನ ಕುಟುಂಬಗಳ ಮುಖ್ಯಸ್ಥರಿಗೆ ‘ಲಕ್ಷ್ಮಿ ಭಂಡಾರ್ ಯೋಜನೆ’ಯ ಮೂಲಕ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.