ಹಾಸನ: ಬ್ಯಾಂಕ್‍ನಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡಾಗ ನಕಲಿ ಚಿನ್ನ ನೀಡಿದ್ದಾರೆ ಎಂದು ಆರೋಪಿಸಿ, ಬ್ಯಾಂಕ್‍ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ, ಉದಯಪುರದಲ್ಲಿರುವ ಹೆಚ್‍ಡಿಸಿಸಿ ಬ್ಯಾಂಕ್‍ನಲ್ಲಿ ನಡೆದಿದೆ.
Advertisement
ಹಿರೇಹಳ್ಳಿ ಗ್ರಾಮದ ಜಯಮ್ಮ, ಮಾಂಗಲ್ಯ ಸರ ಮತ್ತು ಮತ್ತೊಂದು ಚಿನ್ನದ ಸರವನ್ನು ಬ್ಯಾಂಕ್‍ನಲ್ಲಿ ಒಂದು ವರ್ಷದ ಹಿಂದೆ ಅಡವಿಟ್ಟು, ಒಂದು ಲಕ್ಷದ ಹತ್ತು ಸಾವಿರ ಹಣ ಪಡೆದಿದ್ದರು. ಚಿನ್ನ ಅಡವಿಟ್ಟುಕೊಳ್ಳುವ ಮುಂಚೆ ಬ್ಯಾಂಕ್ ಅವರು ಚಿನ್ನವನ್ನು ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಂತರ ಅಸಲಿ ಚಿನ್ನವೆಂದು ಅಡವಿಟ್ಟು ಕೊಂಡು ಸಾಲದ ಹಣ ನೀಡಿದ್ದರು. ಇದನ್ನೂ ಓದಿ: ಆರ್ಥಿಕ ಸಂಕಷ್ಟದಿಂದ ಮನನೊಂದು KSRTC ನೌಕರ ವಿಷ ಸೇವಿಸಿ ಆತ್ಮಹತ್ಯೆ
Advertisement
Advertisement
ಜಯಮ್ಮ ಬ್ಯಾಂಕ್‍ಗೆ ಹಣ ಕಟ್ಟಿ ತಮ್ಮ ಚಿನ್ನ ಬಿಡಿಸಿಕೊಂಡಿದ್ದಾರೆ. ಆದರೆ ಈಗ ಬ್ಯಾಂಕ್ ಅವರು ನಮಗೆ ನಕಲಿ ಚಿನ್ನ ನೀಡಿದ್ದಾರೆ. ಈ ಬಗ್ಗೆ ಕೇಳಿದ್ರೆ ನೀವು ಅಡವಿಟ್ಟ ಚಿನ್ನವೇ ನಕಲಿಯಾಗಿತ್ತು. ಅದನ್ನೇ ನಿಮಗೆ ವಾಪಸ್ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ ಎಂದು ಜಯಮ್ಮ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ದಾಯಾದಿ ಕಲಹ – ವ್ಯಕ್ತಿಗೆ ಬೆಂಕಿ, ಆಸ್ಪತ್ರೆಯಲ್ಲಿ ಸಾವು
Advertisement
ಈ ಪರಿಣಾಮ ಆಕ್ರೋಶಗೊಂಡ ಸ್ಥಳೀಯರು ಬ್ಯಾಂಕ್‍ಗೆ ಮುತ್ತಿಗೆ ಹಾಕಿ, ಬ್ಯಾಂಕಿನ ಗಾಜು ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ನಾವು ಅಸಲಿ ಚಿನ್ನ ಅಡವಿಟ್ಟಿದ್ದೇವೆ. ನೀವು ಪರಿಶೀಲನೆ ನಡೆಸಿದ ನಂತರ ಚಿನ್ನ ಅಡವಿಟ್ಟುಕೊಂಡು ಹಣ ಕೊಟ್ಟಿದ್ದೀರಿ. ನಾವು ಸಾಲ ತೀರಿಸಿದ್ದು, ನಮ್ಮ ಚಿನ್ನ ನಮಗೆ ನೀಡಿ. ನಿಮ್ಮ ನಕಲಿ ಚಿನ್ನ ನಮಗೆ ಬೇಡ ಎನ್ನುತ್ತಿದ್ದಾರೆ.