ಕಪಾಳಕ್ಕೆ ಹೊಡೆದಿದ್ದಕ್ಕೆ ಸೇಡು- ಸ್ನೇಹಿತನ ತಲೆಯನ್ನ ಗೋಡೆಗೆ ಗುದ್ದಿ ಕೊಂದೇಬಿಟ್ರು!

Public TV
1 Min Read
Five arrested

ಮುಂಬೈ: ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪದ ಮೇಲೆ ಮಂಗಳವಾರದಂದು ಪೊಲೀಸರು ಪನ್ವೇಲ್‍ನ ಇಬ್ಬರು ನಿವಾಸಿಗಳನ್ನ ಬಂಧಿಸಿದ್ದಾರೆ. ಇವರಿಬ್ಬರೂ ಕಲ್ಯಾಣ್‍ನ ಹಾಜಿ ಮಲಂಗ್‍ನಲ್ಲಿ ಸ್ನೇಹಿತನ ತಲೆಯನ್ನ ಕಲ್ಲಿಗೆ ಗುದ್ದಿ ಕೊಲೆ ಮಾಡಿದ್ದಾರೆ.

ವಿಲಾಸ್ ಧೊಂಗಾಡೆ(24) ಹಾಗೂ ಆಕಾಶ್ ಶೆಲ್ಕೆ ಬಂಧಿತ ಆರೋಪಿಗಳು. ಫೆಬ್ರವರಿ 23ರಂದು ವಿಲಾಸ್ ಹಾಗೂ ಆಕಾಶ್, ಪ್ರವೀಣ್ ಫರತ್ ಹಾಗೂ ಇನ್ನಿತರ ಕೆಲವು ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದರು. ಆದ್ರೆ ಪ್ರವೀಣ್ ಮಾತ್ರ ಅಂದು ಮನೆಗೆ ಹಿಂದಿರುಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆತಂಕಗೊಂಡಿದ್ದರು.

ಒಂದು ದಿನದ ನಂತರ ಹಾಜಿ ಮಲಂಗ್ ದರ್ಗಾ ಬಳಿ ಪ್ರವೀಣ್ ಶವ ಪತ್ತೆಯಾಗಿತ್ತು. ಪ್ರವೀಣ್ ನ ಪೋಷಕರು ಅವರಿಗೆ ಅನುಮಾನವಿರುವ ಕೆಲವು ಸ್ನೇಹಿತರ ಬಗ್ಗೆ ನಮಗೆ ತಿಳಿಸಿದ್ರು. ಅವರಿಗಾಗಿ ನಾವು ಹುಡುಕಾಟ ನಡೆಸಿದ್ದೆವು. ಕೊನೆಗೂ ಮಂಗಳವಾರದಂದು ಅವರನ್ನ ಬಂಧಿಸಿದ್ದೇವೆ ಎಂದು ಪನ್ವೇಲ್ ತಾಲೂಕು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಾಲೋಜಿ ಶಿಂಧೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಬಂಧಿತರಿಬ್ಬರೂ ಮದ್ಯಪಾನ ಮಾಡಲು ಪ್ರವೀಣ್‍ನನ್ನ ಆಹ್ವಾನಿಸಿದ್ದರು. ಪ್ರವೀಣ್‍ಗೆ ಕುಡಿದು ನಶೆಯೇರಿದ ಬಳಿಕ ಆರೋಪಿಗಳು ಆತನ ತಲೆಯನ್ನ ಕಲ್ಲಿಗೆ ಗುದ್ದಿ ಕೊಲೆ ಮಾಡಿದ್ದರು. ನಂತರ ಶವವನ್ನ ಹಳ್ಳವೊಂದರಲ್ಲಿ ಬಚ್ಚಿಟ್ಟಿದ್ದರು. ಪ್ರವೀಣ್ ಈ ಹಿಂದೆ ವಿಲಾಸ್ ಗೆ ಕಪಾಳಕ್ಕೆ ಹೊಡೆದಿದ್ದರಿಂದ ಇದಕ್ಕೆ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಿದ್ದಾರೆ.

Dead Body

ಪ್ರವೀಣ್ ಮತ್ತು ಆರೋಪಿಗಳು ಸ್ನೇಹಿತರಾಗಿದ್ದರು. ಕೊಲೆಗೆ ಕೆಲವು ದಿನಗಳ ಮುಂಚೆ ಅವರ ಮಧ್ಯೆ ಸಣ್ಣ ಜಗಳವಾಗಿತ್ತು. ಆಗ ಪ್ರವೀಣ್ ವಿಲಾಸ್‍ನ ಕಪಾಳಕ್ಕೆ ಹೊಡೆದಿದ್ದ. ಇದರಿಂದ ಕೋಪಗೊಂಡಿದ್ದ ವಿಲಾಸ್, ಪ್ರವೀಣ್‍ನನ್ನು ಕೊಂದು ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಈ ಕೃತ್ಯದಲ್ಲಿ ಮತ್ತಷ್ಟು ಜನ ಭಾಗಿಯಾಗಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ಮಾಲೋಜಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಹಾಗೂ 34 ರಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *