ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು

Public TV
2 Min Read
duniya vijay

ಸ್ಯಾಂಡಲ್‌ವುಡ್ ಸಲಗ (Salaga) ದುನಿಯಾ ವಿಜಯ್ (Duniya Vijay) ಈಗಾಗಲೇ ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಭೀಮನಾಗಿ ಅಬ್ಬರಿಸಲು ಸಜ್ಜಾಗಿರುವ ಬೆನ್ನಲ್ಲೇ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಸಿನಿ ದುನಿಯಾಗೆ ಇಬ್ಬರು ಪುತ್ರಿಯರನ್ನು ವಿಜಯ್ ಪರಿಚಯಿಸುತ್ತಿದ್ದಾರೆ.

duniya vijay

ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಅನೌನ್ಸ್ ಮಾಡಿದ್ದಾರೆ. ಆದರೆ ನೀವು ಗೆಸ್ ಮಾಡಿದಂತೆ ಕಿರಿ ಮಗಳು ಮೋನಿಷಾ (Monisha) ಅಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ (Monica) ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಮೋನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ (Anupam Kher) ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೋನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ. ಇದನ್ನೂ ಓದಿ:‘ಜವಾನ್’ ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ನಯನತಾರಾ

duniya vijay 1

ಹಾಗಾಗಿ ಹಿರಿ ಮಗಳು ಮೋನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೋನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರಂತೆ. ಜೊತೆಗೆ ಮೋನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೋನಿಷಾ ಬಣ್ಣದ ಜಗತ್ತಿಗೆ ಬರಲಿದ್ದಾರೆ.

duniya vijay 1 2

ವಿಜಯ್ ಅವರ ಇಬ್ಬರು ಮಕ್ಕಳಿಗೂ ಈಗಾಗಲೇ ತುಂಬಾ ಆಫರ್ಸ್ ಬಂದಿದೆ. ಆದರೆ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ನಟನೆಗೆ ಬರೋದನ್ನ ಮುಂದೂಡಲಾಗಿತ್ತು. ಆದ್ರೀಗ ಹಿರಿ ಮಗಳು ಸಿನಿಮಾ ಮಾಡೋ ಉದ್ದೇಶದಿಂದಲೇ ಸಕಲ ತಯಾರಿ ಮುಗಿಸಿದ್ದಾಳೆ. ಹೀಗಾಗಿ ಮೋನಿಕಾ ಲಾಂಚ್ ಮಾಡೋಕೆ ಇದು ಸೂಕ್ತ ಸಮಯ ಎಂದು ವಿಜಯ್ ನಿರ್ಧರಿಸಿದ್ದಾರಂತೆ. ಸದ್ಯ ಮೋನಿಕಾ ಚೊಚ್ಚಲ ಸಿನಿಮಾಗೆ ಅದ್ಭುತ ಸ್ಕ್ರಿಪ್ಟ್ ಕೂಡ ರೆಡಿಯಿದ್ದು, ಒಂದೊಳ್ಳೆ ಸಮಯ ನೋಡ್ಕೊಂಡು ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಇನ್ನು ಹಿರಿಯ ಮಗಳ ಮೊದಲ ಸಿನಿಮಾಗೆ ಸ್ವತಃ ದುನಿಯಾ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.

ಸಕಲ ತಯಾರಿ ಮಾಡಿಕೊಂಡೇ ನಟನೆಗಿಳಿಯುತ್ತಿರುವ ಮೋನಿಕಾ ಕೂಡ ತಂದೆ ದುನಿಯಾ ವಿಜಯ್ ಅವರಂತೆಯೇ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article