ಬೆಂಗಳೂರು: ಜ್ಯೂನಿಯರ್ ಎನ್‍ಟಿಆರ್ ಹೀರೊ ಆಗಿರುವ `ಜೈ ಲವ ಕುಶ’ ಸಿನಿಮಾದಲ್ಲಿ ವಿಜಯ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೊಂದು ದಿನದಲ್ಲಿ ಹೊರ ಬೀಳುವ ಸಾಧ್ಯತೆಯಿದೆ.
ಬಾಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಎನ್‍ಟಿಆರ್ ಫಸ್ಟ್ ಟೈಮ್ ತ್ರಿಬಲ್ ರೋಲ್‍ನಲ್ಲಿ ಕಾಣಿಸುತ್ತಿದ್ದಾರೆ. ಮೂರೂ ವಿಭಿನ್ನ ಗೆಟಪ್ ಗಳು ಕೂಡ ಈ ಚಿತ್ರದಲ್ಲಿವೆ. ಜೈ, ಲವ ಮತ್ತು ಕುಶ ಎನ್ನುವುದು ಪಾತ್ರಗಳ ಹೆಸರು. ಇಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣನ ಹೋಲಿಕೆ ಪಾತ್ರಕ್ಕಿರುತ್ತವೆ ಎಂದು ಫಸ್ಟ್‍ಲುಕ್‍ನಲ್ಲಿ ರಿವೀಲ್ ಆಗಿದೆ.
Advertisement
Advertisement
ಟಾಲಿವುಡ್‍ನಲ್ಲಿ ಜ್ಯೂನಿಯರ್ ಎನ್‍ಟಿಆರ್‍ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸೀನಿಯರ್ ಎನ್‍ಟಿಆರ್ ಮೊಮ್ಮಗ ಎನ್ನುವ ಖ್ಯಾತಿ ಇದೆ. ಅಂಥ ಸ್ಟಾರ್ ಮುಂದೆ ವಿಲನ್ ಆಗುವುದು ಸಣ್ಣ ಮಾತೇನಲ್ಲ. ಅದರಲ್ಲೂ ಇಲ್ಲಿ ಹೀರೊ ಆಗಿರುವ ವಿಜಿ ಅಲ್ಲಿ ವಿಲನ್ ಆಗಿ ನಟಿಸುವುದು ರಿಸ್ಕ್ ಕೂಡ ಹೌದು. ಆದರೆ ಬಹುಶಃ ಇವರು ಮಾಡುತ್ತಿರುವ ಪಾತ್ರಕ್ಕೂ ಒಂದು ಗತ್ತು ಇದ್ದಿರಬೇಕು. ಹೀಗಾಗಿಯೇ ವಿಜಿ ಒಪ್ಪಿಕೊಂಡಿದ್ದಾರಂತೆ ಎನ್ನುವುದು ಗಾಂಧಿನಗರದ ಮಾತು.
Advertisement
Advertisement