ದುನಿಯಾ ವಿಜಯ್ ಪುತ್ರನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಹಾಗಾಗಿ ಸ್ವತಃ ಕಿಟ್ಟಿಯವರೇ ಸದಾಶಿವನಗರದ ಎಸಿಪಿ ಕಚೇರಿಗೆ ಬಂದು ಎಸಿಪಿ ಚಂದನ್ ಕುಮಾರ್ ಮುಂದೆ ಹಾಜರಾಗಿದ್ದಾರೆ. ಸದಾಶಿವನಗರದ ಎಸಿಪಿ ಕಚೇರಿಯಲ್ಲಿ ಕಿಟ್ಟಿ ವಿಚಾರಣೆ ನಡೆಸಲಾಗಿದೆ.
Advertisement
ನಟ ದುನಿಯಾ ವಿಜಯ್ ಮತ್ತು ಜಿಮ್ ತರಬೇತಿದಾರು ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಇದೀಗ ಮತ್ತೆ ಮರುಜೀವ ಪಡೆದಿದೆ. ಹೈಕೋರ್ಟ್ ಸೂಚನೆಯ ಮೇರೆಗೆ ದುನಿಯಾ ವಿಜಯ್ ಮಗನ ಮೇಲೆ ಹಲ್ಲೆ ಮಾಡಿದ್ದ ಪಾನಿಪುರಿ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಮೂಲಕ 2018 ರಲ್ಲಿ ನಡೆದ ಪ್ರಕರಣವನ್ನು ಮತ್ತೆ ರೀ ಓಪನ್ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.
Advertisement
Advertisement
2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು. ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದೂ ಬಿಟ್ಟಿದ್ದರು ಎಂದು ಹೇಳಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ
Advertisement
ಈ ಗಲಾಟೆ ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು. ವಿಜಯ್ ಮೇಲೆ ಪಾನಿಪುರಿ ಕಿಟ್ಟಿ ಕೂಡ ದೂರು ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ನಡೀತಾ ಇದೆ. ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಸಾಕ್ಷ್ಯಗಳ ಕೊರೆಯಿಂದಾಗಿ ಕ್ಲೋಸ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಸದರಿ ಕೇಸ್ ಅನ್ನು ಗಮನಿಸಿದ ನ್ಯಾಯಾಲಯವು ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಎಫ್.ಐ.ಆರ್ ಮಾಡುವಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸೂಚನೆ ನೀಡಿತ್ತು. ಇದೀಗ ಕೇಸ್ ದಾಖಲಾಗಿದೆ. ಮತ್ತು ಕಿಟ್ಟಿ ಹಾಜರ್ ಕೂಡ ಆಗಿದ್ದಾರೆ.