ಜೈಲಿನ ಊಟ ಧಿಕ್ಕರಿಸಿ, ಪುಂಡಾಟ ಮೆರೆದ ದುನಿಯಾ ವಿಜಿ!

Public TV
1 Min Read
DUNIYA VIJAY1

ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಜೈಲಿನಲ್ಲಿ ನೀಡಿದ್ದ ಊಟವನ್ನು ಧಿಕ್ಕರಿಸಿ, ಮತ್ತೆ ತನ್ನ ಮೊಂಡಾಟವನ್ನು ಪ್ರದರ್ಶಿಸಿದ್ದಾರೆ.

ಹೌದು, ನಾನೇನು ಮಾಡಿದರೂ ಸರಿ, ನಾನೇ ಬಾಸು ನಂದೆ ದುನಿಯಾ ಎನ್ನುತಿದ್ದ ಕರಿಚಿರತೆ ಈಗ ಕಂಬಿ ಹಿಂದೆ ಸೆರೆಯಾಗಿದೆ. ಸಣ್ಣದೊಂದು ಗಲಾಟೆಗೆ ಜಿಮ್ ಟ್ರೈನರ್ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿದ್ದಲ್ಲದೇ, ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ದುನಿಯಾ ವಿಜಿ ಜೈಲು ಸೇರಿದ್ದಾರೆ.

duniya vijay

ಮಗನಿಗೆ ಸಣ್ಣ ಮಾತನ್ನು ಹೇಳಿದಕ್ಕೆ ಕುಪಿತಕೊಂಡ ದುನಿಯಾ ವಿಜಿ ತನ್ನ ಪಟಾಲವನ್ನೇ ಕರೆದು ಜಗಳಕ್ಕೆ ಮಾಡಿಕೊಂಡಿದ್ದರು. ಭಾನುವಾರ ಜೈಲಿನ ಕೈದಿ ನಂಬರ್ ನೀಡುವ ಸಿಬ್ಬಂದಿ ಗೈರಾಗಿದ್ದರಿಂದ ಸ್ಲಂ ಬಾಲನಿಗೆ ಕೈದಿ ನಂಬರ್ ಸಿಕ್ಕಿರಲಿಲ್ಲ. ಇಂದು ವೈದ್ಯಕೀಯ ಪರೀಕ್ಷೆಗಳನ್ನು ಮುಗಿಸಿದ ಬಳಿಕ ಕೈದಿ ನಂಬರ್ ನೀಡಲಾಗುತ್ತದೆ. ಭಾನುವಾರ ನಡೆದ ಬೆಳವಣಿಗೆಯಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ವಿಜಿಯವರನ್ನು ಜೈಲಿಗೆ ಕಳುಹಿಸುವ ವೇಳೆಗೆ ರಾತ್ರಿ 10 ಗಂಟೆಯಾಗಿತ್ತು. ರಾತ್ರಿಯಾಗಿದ್ದರಿಂದ ಜೈಲಿನಲ್ಲಿ ಸಿಬ್ಬಂದಿ ಊಟ ನೀಡಿದರು ದುನಿಯಾ ವಿಜಿ ಹಾಗೂ ಅವರ ತಂಡ ಊಟ ನಿರಾಕರಿಸಿ, ಮತ್ತೊಮ್ಮೆ ತಮ್ಮ ಮೊಂಡಾಟವನ್ನು ತೋರಿಸಿದ್ದಾರೆ.

ಇದಲ್ಲದೇ ವಿಜಿ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಮಾರುತಿ ಗೌಡ ಕುಟುಂಬ ಡಿಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ವಿಜಿಗೆ ಬೇಲ್ ಸಿಗುತ್ತಾ, ಇಲ್ಲಾ ಜೈಲೇ ಗತಿಯೇ ಎನ್ನುವ ವಿಷಯ ಗೊತ್ತಾಗಲಿದೆ.

duniya vijay maruti gowda copy

ರಾಜಾರೋಷವಾಗಿ ಹೊಡೆದು ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ದುನಿಯಾ ವಿಜಿಗೆ ಭಾನುವಾರ ಕರಾಳ ದಿನವಾಗಿತ್ತು. ಬಚಾವಾಗೋ ಕೇಸಿನಲ್ಲೂ ತಪ್ಪಿಸಿಕೊಳ್ಳಲಾಗದೇ ಠಾಣೆಯಲ್ಲೇ ಕುಳಿತು ಊಟ ಸೇವಿಸಿದ್ದರು. ಅಲ್ಲದೇ ನಾನು ಎಷ್ಟೇ ಚೀರಾಡಿದರೂ ಉಪಯೋಗವಿಲ್ಲವೆಂದು, ಸ್ಟೇಷನ್ ನಲ್ಲಿಯೇ ಗಾಢಾ ನಿದ್ರೆಗೆ ಜಾರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *