ಬೆಂಗಳೂರು: ಬಂಧನ ಪ್ರಕ್ರಿಯೆಗೂ ಮುನ್ನವೇ ದುನಿಯಾ ವಿಜಯ್‍ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ.
ಒಬ್ಬರ ಶ್ಯೂರಿಟಿ ಷರತ್ತು ವಿಧಿಸಿ ಸಿಸಿಎಚ್ 65 ನೇ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಕೂಡಲೇ ಸಹಿ ಮಾಡಿಸಿ ದುನಿಯಾ ವಿಜಿ ಬಿಡುಗಡೆಗೊಳಿಸಬೇಕು. ದುನಿಯಾ ವಿಜಯ್ ಬಂಧನವಾಗಿದ್ದರೂ ಬಿಡುಗಡೆಗೊಳಿಸುವಂತೆ ಕೋರ್ಟ್ ಆದೇಶಿಸಿದೆ.
Advertisement
ಒಬ್ಬರು ಸಬ್ ಇನ್ಸ್ ಪೆಕ್ಟರ್ ಹಾಗು ನಾಲ್ಕು ಜನ ಸಿಬ್ಬಂದಿ ದುನಿಯಾ ವಿಜಿಯನ್ನು ಇನ್ನೋವಾ ಕಾರಿನಲ್ಲಿ ತಮಿಳುನಾಡಿನಿಂದ ಕರೆತರುತ್ತಿದ್ದಾರೆ. ಸದ್ಯ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷೆನ್ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಹಾಗೂ 225 (ಆರೋಪಿಯ ಬಂಧನಕ್ಕೆ ಅಡ್ಡಿ) ಅಡ್ಡಿಪಡಿಸುವ ಪ್ರಕರಣ ದಾಖಲಾಗಿದೆ.
Advertisement
Advertisement
ಏನಿದು ಪ್ರಕರಣ?
ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಮನೆಗೆ ಮೇ 30 ಬುಧವಾರದಂದು ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು.
Advertisement
ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ಥಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯಾ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಗುರುವಾರದಿಂದ ದುನಿಯಾ ವಿಜಯ್ ನಾಪತ್ತೆಯಾಗಿದ್ದರು. ಈ ಬಗ್ಗೆ ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ದೂರು ನೀಡಿದ್ದು, ಈಗ ರೆಸಾರ್ಟ್‍ವೊಂದರಲ್ಲಿ ಅಡಗಿ ಕುಳಿತಿದ್ದ ದುನಿಯಾ ವಿಜಿಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.