`ವೀರ ಸಿಂಹ ರೆಡ್ಡಿ’ (Veera Simha Reddy) ಗೆಲುವಿನ ಖುಷಿಯಲ್ಲಿರುವ `ಸಲಗ’ ಖ್ಯಾತಿಯ ದುನಿಯಾ ವಿಜಯ್ (Duniya Vijay) ಇಂದು ತಮ್ಮ 49 ವರ್ಷದ ಹುಟ್ಟುಹಬ್ಬವನ್ನು (Birthday) ಮೊದಲ ಬಾರಿಗೆ ಹುಟ್ಟೂರಿನಲ್ಲಿ, ತಮ್ಮ ತಂದೆ- ತಾಯಿ ಸಮಾಧಿ ಬಳಿ ಅಭಿಮಾನಿಗಳ ಜೊತೆ ಆಚರಿಸಿದ್ದಾರೆ.

ಅಭಿಮಾನಿಗಳಿಗೆ ಭರ್ಜರಿ ಬಾಡೂಟದ ವ್ಯವಸ್ಥೆಯನ್ನ ಮಾಡಿದ್ದರು. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಫ್ಯಾನ್ಸ್‌ಗೆ ಚಿಕಿನ್ ಬಿರಿಯಾನಿ, ಚಿಕನ್ ಫ್ರೈ ಮಾಡಿ ತಾವೇ ಕೈಯಾರೆ ಅಭಿಮಾನಿಗಳಿಗೆ ಬಡಿಸಿ ಕೈತುತ್ತು ತಿಂದರು. ಅಭಿಮಾನಿಗಳ ನಟ ದುನಿಯಾ ವಿಜಯ್‌ಗೆ ಕೈತುತ್ತು ತಿನ್ನಿಸಿ ನಟನ ಸಿಂಪ್ಲಿಸಿಟಿ ಕಂಡು ಮತ್ತಷ್ಟು ಖುಷಿಯಾದ್ರು. ವೇದಿಕೆ ನಿರ್ಮಾಣ ಮಾಡಿದ್ದ ಸುತ್ತಲೂ ಭೀಮ ಸಿನಿಮಾ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ದುನಿಯಾ ವಿಜಿ ಸಿನಿಮಾ ಹಾಡುಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ರು. ಪ್ರತಿವರ್ಷವು ಸಹ ಹುಟ್ಟೂರಿನಲ್ಲಿಯೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡು ಅನ್ನಕೊಟ್ಟ ಅಭಿಮಾನಿಗಳು ಊಟವನ್ನ ಹಾಕುವ ಮೂಲಕ ಅವರ ಜೊತೆ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಬೇಕು ಎಂದು ತಿರ್ಮಾನಿಸಿದ್ದೇನೆ. ಇದು ತಂದೆತಾಯಿ ಇರುವಂತ ಪುಣ್ಯ ಸ್ಥಳ ಹಾಗಾಗಿ ಮುಂದಿನ ದಿನಗಳಲ್ಲಿ ಬರ್ತಡೇ ಸೆಲೆಬ್ರೇಷನ್ ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಆಗುತ್ತದೆ ಎಂದು ದುನಿಯಾ ವಿಜಿ ಸಂತಸ ಹಂಚಿಕೊಂಡರು.

ಎಕರೆಗಟ್ಟಲೇ ಪೆಂಡಲ್ ಹಾಕಿ ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ ಚಿಲ್ಲಿ ಚಿಕನ್ ಸಿದ್ದಪಡಿಸಿದ್ದ ವಿಜಿ, ತಾನೇ ಅಭಿಮಾನಿಗಳಿಗೆ ಉಣಬಡಿಸುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸಹ ನೆಚ್ಚಿನ ನಟನ ಕಣ್ತುಂಬಿಕೊಳ್ಳಲು ಸರದಿ ಸಾಲಿನಲ್ಲಿ ಮುಗಿ ಬಿದ್ದು ಶುಭಹಾರೈಸಿ ಖುಷಿಪಟ್ಟಿದ್ದಾರೆ. ಒಟ್ನಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುವ ಮೂಲಕ ದುನಿಯಾ ವಿಜಯ್ ಗಮನ ಸೆಳೆದಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k


