ಚೆನ್ನೈ: ಸ್ಯಾಂಡಲ್ ವುಡ್‍ನ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ನಟ ದುನಿಯಾ ವಿಜಯ್ ನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತಮಿಳುನಾಡಿನ ಕೊಯಮತ್ತೂರು ಬಳಿ ದುನಿಯಾ ವಿಜಯ್‍ನನ್ನು ಬಂಧಿಸಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ನಟ ದುನಿಯಾ ವಿಜಯ್ ಮೇಲೆ ಪ್ರಕರಣ ದಾಖಲಾಗಿತ್ತು.
Advertisement
Advertisement
ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಸುಂದರ್ ಮನೆಗೆ ತಡರಾತ್ರಿ ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು. ಇದನ್ನೂ ಓದಿ: ಇನ್ನೂ ಪತ್ತೆಯಾಗದ ಕರಿ ಚಿರತೆ- ಪೊಲೀಸರಿಂದ ವಿಶೇಷ ತಂಡ ರಚನೆ
Advertisement
ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ಥಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯಾ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ದೂರು ನೀಡಿದ್ದು, ಈಗ ರೆಸಾರ್ಟ್‍ವೊಂದರಲ್ಲಿ ಅಡಗಿ ಕುಳಿತಿದ್ದ ದುನಿಯಾ ವಿಜಿಯ್‍ನನ್ನು ಪೊಲೀಸರು ಬಂಧಿಸಿದ್ದಾರೆ.