ಭಾರೀ ಮಳೆಗೆ ಟ್ರ್ಯಾಕ್‌ಗೆ ಬಿದ್ದ ಮರ: ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

Public TV
1 Min Read
Bengaluru Purple Line Metro

– ಮರ ತೆರವು ಬಳಿಕ ಮೆಟ್ರೋ ಸಂಚಾರ ಮತ್ತೆ ಆರಂಭ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಟ್ರ್ಯಾಕ್‌ಗೆ ಮರ ಉರುಳಿ, ನೇರಳ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು (Namma Metro) ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಿಬ್ಬಂದಿ ಮರ ತೆರವುಗೊಳಿಸಿದ ಬಳಿಕ ಮೆಟ್ರೋ ಸಂಚಾರ ಮತ್ತೆ ಆರಂಭವಾಯಿತು.

ಎರಡು ದಿನಗಳಿಂದ ಬೆಂಗಳೂರಿನಲ್ಲಿ ವರುಣ ಅಬ್ಬರಿಸುತ್ತಿದ್ದು, ಮಳೆಯ ಪರಿಣಾಮ ನಮ್ಮ ಮೆಟ್ರೋ ರೈಲಿನ ನೇರಳೆ ಬಣ್ಣದ (Purple Line Metro) ಮಾರ್ಗದಲ್ಲಿ ಮರವೊಂದು ಟ್ರ್ಯಾಕ್‌ಗೆ ಉರುಳಿ, ಎಸ್‌ವಿ ರೋಡ್ ಹಾಗೂ ಇಂದಿರಾನಗರ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡು ವ್ಯತ್ಯಯ ಉಂಟಾಗಿತ್ತು.ಇದನ್ನೂ ಓದಿ:

ಬುಧವಾರ ಬೆಳಗ್ಗೆ 6:05ರಿಂದ 8 ಗಂಟೆಯವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರವನ್ನು ತೆರವುಗೊಳಿಸಿದರು. ಈ ವೇಳೆ ಇಂದಿರಾನಗರ -ಚಲಘಟ್ಟ ಹಾಗೂ ಬೈಯಪ್ಪನಹಳ್ಳಿ – ವೈಟ್‌ಫೀಲ್ಡ್ ನಿಲ್ದಾಣದವರೆಗೆ ಮೆಟ್ರೋ ಸುಗಮ ಸಂಚಾರಗೊಂಡಿದ್ದು, ಈ ಎರಡು ಮೆಟ್ರೋ ನಿಲ್ದಾಣಗಳ ಮಧ್ಯೆ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಮೆಟ್ರೋ ಸಂಚಾರ ಪುನರಾರಂಭ:
ಬುಧವಾರ ಬೆಳಗ್ಗೆ 6:05 ಸ್ಥಗಿತಗೊಂಡ ಮೆಟ್ರೋ, ಮರವು ತೆರವುಗೊಳಿಸಿದ ಬಳಿಕ 8 ಗಂಟೆಗೆ ಮತ್ತೆ ಪುನರಾರಂಭಗೊಂಡಿದೆ. ಇದೀಗ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭಗೊಂಡಿದೆ.ಇದನ್ನೂ ಓದಿ:

Share This Article