ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ (UAE) ಧಾರಾಕಾರ ಮಳೆಯಾಗುತ್ತಿದ್ದು, ಮರುಭೂಮಿ ದೇಶದ ಸುತ್ತಲೂ ವ್ಯಾಪಕವಾದ ಪ್ರವಾಹವನ್ನು ಉಂಟು ಮಾಡಿದೆ.
ದುಬೈನ (Dubai Rains) ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೆರೆಯಂತಾಗಿತ್ತು. ನಿಲ್ದಾಣದಲ್ಲೇ ತೊರೆಯಂತೆ ನೀರು ಹರಿಯುತ್ತಿದ್ದರಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ದುಬೈನಲ್ಲಿನ ಪ್ರವಾಹ ದೃಶ್ಯದ ವೀಡಿಯೋ ಹಾಗೂ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಒಮಾನ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ- 13 ಮಂದಿ ದುರ್ಮರಣ
Advertisement
Advertisement
ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣದಿಂದ ಭಾರತ, ಪಾಕಿಸ್ತಾನ, ಸೌದಿ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವು ದೇಶಗಳಿಗೆ ಏಪ್ರಿಲ್ 16 ರಂದು ವಿಮಾನಗಳ ಕಾರ್ಯಾಚರಣೆ ವಿಳಂಬವಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
Advertisement
Advertisement
ಮರುಭೂಮಿ ರಾಷ್ಟ್ರದಾದ್ಯಂತ ವ್ಯಾಪಕವಾದ ಪ್ರವಾಹ ಉಂಟುಮಾಡಿದ ಭಾರೀ ಮಳೆಯು ಭಾಗಶಃ ಮೋಡ ಬಿತ್ತನೆಯಿಂದ ಉಂಟಾಗಿದೆ. ಯುಎಇ ಮತ್ತು ಬಹ್ರೇನ್‌ನಾದ್ಯಂತ ಪ್ರವಾಹಕ್ಕೆ ಕಾರಣವಾದ ಧಾರಾಕಾರ ಮಳೆಯಿಂದ ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈ ನಿಷ್ಕ್ರಿಯಗೊಂಡಿದೆ. ಭಾನುವಾರ ಮತ್ತು ಸೋಮವಾರ ಒಮಾನ್‌ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭಾರತೀಯ ಸಿಬ್ಬಂದಿ ಭೇಟಿಗೆ ಅಧಿಕಾರಿಗಳಿಗೆ ಇರಾನ್ ಅವಕಾಶ