ದುಬೈ: ಈ ಬಾರಿ ಅದ್ಧೂರಿಯಾಗಿ ದುಬೈನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ದುಬೈ ಸರ್ಕಾರವು ಭಾರತೀಯ ರಾಯಬಾರ ಕಚೇರಿ ಜೊತೆಗೂಡಿ 10 ದಿನಗಳ ದೀಪಾವಳಿ ಉತ್ಸವವನ್ನು ಆಯೋಜಿಸಿದೆ.
ದೀಪಾವಳಿಯ ಮೊದಲ ದಿನವಾದ ನವೆಂಬರ್ 1ರಂದು ದುಬೈ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಭಾರತದ ರಾಷ್ಟ್ರಗೀತೆಯನ್ನು ಇಂಪಾಗಿ ಬಾರಿಸಿದ್ದಾರೆ. ಇದೇ ವೇಳೆ ಅವರ ಹಿಂದೆಯಿದ್ದ ಎಲ್‍ಇಡಿ ಪರದೆಯ ಮೇಲೆ ಭಾರತದ ತ್ರೀವರ್ಣ ಧ್ವಜವನ್ನು ಬಿಂಬಿಸಿ ಗೌರವ ಸಲ್ಲಿಸಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
Advertisement
Advertisement
ಒಟ್ಟು 10 ದಿನಗಳ ಕಾಲ ನಡೆಯುವ ದೀಪಾವಳಿ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಾತ್ರಿ ಆಗುತ್ತಿದ್ದಂತೆ ದುಬೈ ನಗರಿಯಲ್ಲಿ ಬಣ್ಣ ಬಣ್ಣದ ಬೆಳಕಿನ ದೀಪಗಳು, ಪಟಾಕಿ ಭಾರೀ ಸದ್ದು ಮಾಡುತ್ತಿವೆ. ಇದೇ ಮೊದಲ ಬಾರಿಗೆ ಇಷ್ಟು ಅದ್ಧೂರಿಯಾಗಿ ದುಬೈನಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಈ ಉತ್ಸವವು ನವೆಂಬರ್ 10ರಂದು ಮುಕ್ತಾಯವಾಗಲಿದೆ.
Advertisement
ದುಬೈ ಮೂಲದ ವಿಮಾನಯಾನ ಕಂಪೆನಿ ಎಮಿರೈಟ್ಸ್ ಕೂಡ ದೀಪಾವಳಿಯನ್ನು ಆಚರಿಸುತ್ತಿದೆ. ಎಮಿರೈಟ್ಸ್ ಗಗನಸಖಿಯರು ಫುಡ್ ಟ್ರಕ್ ಮೂಲಕ ಭಾರತೀಯ ಸಂಪ್ರದಾಯದ ಸಿಹಿ ಖಾದ್ಯ ಹಾಗೂ ತಿನಿಸುಗಳನ್ನು ಹೊತ್ತು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ನೀಡಿ ದೀಪಾವಳಿಯ ಶುಭಕೋರುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Diwali celebration in Dubai. Friend has shared this video from Ground Zero. A proud moment Indeed! Happy Diwali to all brother and Sisters of Dubai. pic.twitter.com/JflSGqqsoL
— Prakash Priyadarshi (@priyadarshi108) November 5, 2018