ಬೆಂಗಳೂರು: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್&ಇಂಡಸ್ಟ್ರಿಸ್ ಯುಎಇ (Bearys Chamber of Commerce and Industries UAE) ನೇತೃತ್ವದಲ್ಲಿ ಯುಎಇಯಲ್ಲಿರುವ ಎಲ್ಲಾ ಬ್ಯಾರಿ ಸಂಘಟನೆಗಳ ಸಹಯೋಗದಲ್ಲಿ 2025ರ ಫೆಬ್ರವರಿ 9ರಂದು ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.
ಡಿ.8ರಂದು ಅಜ್ಮಾನ್ ತುಂಬೆ ಮೆಡಿಸಿಟಿ ಸಭಾಂಗಣದಲ್ಲಿ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಂಬೆ ಗ್ರೂಪ್ ಸ್ಥಾಪಕರು, ಅನಿವಾಸಿ ಉದ್ಯಮಿ ತುಂಬೆ ಮೊಹಿದ್ದೀನ್ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮದ ಸಿದ್ಧತೆಗೆ ಅಧಿಕೃತ ಚಾಲನೆ ನೀಡಿದರು. ಇದನ್ನೂ ಓದಿ: ಬಾಣಂತಿಯರ ಮರಣದಲ್ಲೂ ರಾಜಕೀಯ – 6 ಸಾವಿಗೆ 6 ವರ್ಷದ ಲೆಕ್ಕ ಕೊಟ್ಟ ಸರ್ಕಾರ!
Advertisement
Advertisement
ಬ್ಯಾರೀಸ್ ಚೇಂಬರ್ ಯುಎಇ ಅಧ್ಯಕ್ಷ ಹಿದಾಯತ್ ಅಡ್ಡೂರ್ ಬ್ಯಾರಿ ಸಮುದಾಯದ ಉದ್ಯಮ ಕ್ಷೇತ್ರದ ಇತಿಹಾಸದ ಬಗ್ಗೆ ಮಾತನಾಡಿ, ಬ್ಯಾರೀಸ್ ಚೇಂಬರ್‌ನ ಗುರಿ ಹಾಗೂ ಬ್ಯಾರಿ ಮೇಳದ ಉದ್ದೇಶದ ಬಗ್ಗೆ ಮಾತನಾಡಿದರು. ಇದನ್ನೂ ಓದಿ: Tumakuru | ವರ್ಕ್ ಫ್ರಮ್ ಹೋಂ ಆಮಿಷವೊಡ್ಡಿ ಮಹಿಳೆಗೆ 14.15 ಲಕ್ಷ ವಂಚನೆ
Advertisement
Advertisement
ಬ್ಯಾರಿ ಮೇಳದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ, ಭಾಗವಹಿಸಿಸುವ ಅತಿಥಿಗಳ ಬಗ್ಗೆ ಉಪಾಧ್ಯಕ್ಷ ಬಶೀರ್ ಕಿನ್ನಿಂಗಾರ್, ಹಂಝ ಅಬ್ದುಲ್ ಖಾದರ್, ಮಹಮ್ಮದ್ ಅಲಿ ಉಚ್ಚಿಲ್, ಇಮ್ರಾನ್ ಎರ್ಮಾಳ್ ವಿವರಿಸಿದರು. ಅಂದು ನಡೆಯಲಿರುವ ಉದ್ಯೋಗ ಮೇಳ, ದೊರಕಲಿರುವ ಹಲವಾರು ಉದ್ಯೋಗಾವಕಾಶಗಳ ಬಗ್ಗೆ ಮಹಮ್ಮದ್ ಮುಸ್ತಾಕ್ ಮಾಹಿತಿ ನೀಡಿದರು. ಇದನ್ನೂ ಓದಿ: ಅತ್ಯಾಚಾರ ಖಂಡಿಸಿ ಪ್ರತಿಭಟನೆ – ಕಿಡಿಗೇಡಿಗಳಿಂದ ಕಲ್ಲು ತೂರಾಟ!
ಬ್ಯಾರಿ ಮೇಳದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಯಶಸ್ವಿ ಉದ್ಯಮಿಗಳನ್ನು, ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು. ಕರಾವಳಿಯ ಪ್ರಸಿದ್ಧ ಆಹಾರ, ತಿಂಡಿಗಳ ಮಳಿಗೆಗಳು, ವಿವಿಧ ಉದ್ಯಮ ಕ್ಷೇತ್ರದ 60ಕ್ಕೂ ಹೆಚ್ಚಿನ ಮಳಿಗೆಗಳು ಇರಲಿವೆ. ಇದನ್ನೂ ಓದಿ: ʻಒಂದು ರಾಷ್ಟ್ರ ಒಂದು ಚುನಾವಣೆʼ ಸನ್ನಿಹಿತನಾ? – ಈ ಅಧಿವೇಶನದಲ್ಲೇ ಮಸೂದೆ ಮಂಡನೆಗೆ ಪ್ಲಾನ್!
ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಯುಎಇಯ ಪ್ರಮುಖ ಬ್ಯಾರಿ ಸಂಘಟನೆಗಳಾದ ಬಿಸಿಎಫ್, ಬಿಡಬ್ಲ್ಯೂಎಫ್, ಕೆಸಿಎಫ್, ಕೆಐಸಿ, ದಾರುಲ್ ಇರ್ಷಾದ್, ಡಿಕೆಎಸ್‌ಸಿ, ಕೆಎಂಎಎಸ್, ಹಿದಾಯ ಫೌಂಡೇಶನ್, ಕೆಡಿಸಿ, ಅಲ್ ಖಮರ್, ಎಸ್‌ಯುಎಸಿ, ಪ್ರವಾಸಿ ಕೂಟ ವಿಟ್ಲ, ಟಿಓಡಿ, ಕೆಎಎಫ್, ಕೆಎಂಎಜೆ, ಎಂಎಫ್‌ಡಿ, ಎಸ್‌ಕೆಎಸ್‌ಎಸ್‌ಎಫ್ ಯುಎಇ, ದಾರುನ್ನೂರು, ದಾರುಸ್ಸಲಾಂ, ಶಂಶುಲ್ ಉಲಾಮ ಸೆಂಟರ್, ದಾರುಲ್ ಹಸನಿಯ್ಯ ಎಜುಕೇಷನ್ ಸೆಂಟರ್, ಅಲ್ ಇಸ್ಲಾಮೀಯ ವೆಲ್ಫೇರ್, ಮೂಳೂರು ವೆಲ್ಫೇರ್, ಅಲ್ ಹುದಾ, ಅಲ್ ಇಬಾದ್ ಇಂಡಿಯನ್ ಸ್ಕೂಲ್, ನೂರ್ ಫ್ರೆಂಡ್ಸ್, ಸಾದಿಯ ಬೆಂಗಳೂರು, ಕೊಡಗು ವೆಲ್ಫೇರ್, ಮಸ್ದರ್ ಕೊಪ್ಪಳ, ಅಲ್ ಮದೀನಾ ಮಂಜನಾಡಿ, ಮುಹಿನ್ನುಸುನ್ನ ದಾವಣಗೆರೆ, ಮರ್ಕಝ್ ಉಲ್ ಹುದಾ ಕುಂಬ್ರ, ದಾರುಲ್ ಹಿದಾ ಬೆಳ್ಳಾರೆ ಹಾಗೂ ಹಲವು ಮುಖಂಡರು, ಉದ್ಯಮಿಗಳು ಭಾಗವಹಿಸಿದರು. ಇದನ್ನೂ ಓದಿ: ಆರ್‌ಬಿಐ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ
ಬ್ಯಾರಿ ಮೇಳ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಷಾ ಮಂತೂರ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬ್ಯಾರೀಸ್ ಚೇಂಬರ್ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು. ಇದನ್ನೂ ಓದಿ: New Delhi | ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟ ಬಿಜೆಪಿ ಕೌನ್ಸಿಲರ್!