ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

Public TV
2 Min Read
chiru sarja

ನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಚಿರು ಸರ್ಜಾ 2020ರಲ್ಲಿ ಅಗಲಿದ್ದರು. ಅವರು ನಟಿಸಿರುವ ಕೊನೆಯ ಸಿನಿಮಾ `ರಾಜಮಾರ್ತಾಂಡ’ (Rajamarthanda) ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಚಿರು ಕೊನೆ ಚಿತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಧ್ರುವ ಸರ್ಜಾ (Druva sarja) ಸಾಥ್ ನೀಡಿದ್ದಾರೆ. ಚಿರು ನಟಿಸಿರುವ ಸಿನಿಮಾ ಮೇಲೆ ಧ್ರುವಾಗಿರುವ ಪ್ರೀತಿ, ಕಮೀಟ್‌ಮೆಂಟ್ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಚಿರು ಸಿನಿಮಾ ಬಗ್ಗೆ ಧ್ರುವಾ ಸರ್ಜಾ  ಮೌನ ಮುರಿದಿದ್ದಾರೆ.

druva sarja 1

ಚಿರು ಕಡೆಯ ಸಿನಿಮಾ `ರಾಜಮಾರ್ತಾಂಡ’ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಹೀಗಿರುವಾಗ ಚಿರು ನಿಧನದ ಮುನ್ನ ಈ ಚಿತ್ರ ಕಂಪ್ಲೀಟ್ ಆಗಿತ್ತು. ಚಿರು ಪಾತ್ರದ ಡಬ್ಬಿಂಗ್ ಒಂದೇ ಬಾಕಿಯಿತ್ತು. ಅದರ ಜವಾಬ್ದಾರಿಯನ್ನ ಧ್ರುವ ಸರ್ಜಾ ಹೊತ್ತಿದ್ದಾರೆ. ಅಣ್ಣನ ಸಿನಿಮಾವೆಂದು ಪ್ರೀತಿಯಿಂದ ಡಬ್ಬಿಂಗ್ ಮಾಡಿ ಕೊಡ್ತಿದ್ದಾರೆ. ಈ ಬಗ್ಗೆ ಪ್ರಥಮ್ ಕೂಡ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

ನಿನ್ನೆ ಚಿರಂಜೀವಿ ಸರ್ಜಾ ಅಣ್ಣವ್ರ `ರಾಜಮಾರ್ತಾಂಡ’ ಸಿನಿಮಾ ಡಬ್ಬಿಂಗ್ ಟೈಂ ಇದು. ಮಧ್ಯಾಹ್ನ ಊಟಕ್ಕೆ ಬನ್ನಿ ಸಿಗೋಣ ಅಂತ ಹೇಳಿದವರು ಡಬ್ಬಿಂಗ್ ಥಿಯೇಟರ್‌ನಿಂದ ಹೊರ ಬಂದಾಗ ರಾತ್ರಿ 7ಗಂಟೆ ಆಗಿತ್ತು. ಡಬ್ಬಿಂಗ್ ಮುಗೀತಾ ಎಂದು ಕೇಳಿದಕ್ಕೆ ನಮ್ ಹೀರೋ ಧ್ರುವ ಸರ್ಜಾ ಹೇಳಿದಿಷ್ಟು. ಇಲ್ಲ ಇನ್ನೊಂದೆರಡು ದಿನ ಇದೆ ಮಾಡಿ ಮುಗಿಸುತ್ತೀನಿ. ಅಣ್ಣ ಇಲ್ಲ ಅಂದಾಗ ಹೇಗೇಗೋ ಮಾಡೋಕಾಗಲ್ಲ.ಕೆಲಸ ಒಪ್ಪಿಕೊಂಡ ಮೇಲೆ ಚೆನ್ನಾಗಿ ಮಾಡ್ಬೇಕು ಬ್ರೋ, ಲೇಟಾದ್ರೂ ನೀಟಾಗಿ ಮಾಡೋಣ ಅಂದಿದ್ದರು ಪ್ರತಿ ದೃಶ್ಯಕ್ಕೂ ಜೀವ ತುಂಬಿದ್ದಕ್ಕೆ ಸಾಕ್ಷಿಯಾಗಿತ್ತು. ಮೂವರು ಹಿರಿಯರನ್ನು ಧ್ರುವ ಅವ್ರಿಗೆ ಪರಿಚಯ ಮಾಡೋಣ ಅಂತ ಕರೆದುಕೊಂಡು ಹೋಗಿದ್ದೆ. ಅದ್ರಲ್ಲಿ ಒಬ್ಬರು ಹಿರಿಯರು ಹೇಳಿದ್ದಿಷ್ಟು. ಪ್ರಥಮ್, ಧ್ರುವ ಸರ್ಜಾ ಅವ್ರು ಒಬ್ಬ ಗೆದ್ದರೆ ಕನಿಷ್ಟ ಸಾವಿರ ಜನ ನೆಮ್ಮದಿಯಾಗಿ ಊಟ ಮಾಡುತ್ತಾರೆ ಅಂತ. ಹೀಗಾಗಿ ನಮ್ಮ ಮೀಟಿಂಗ್ ಇನ್ನೊಂದು ದಿನಕ್ಕೆ ಪೋಸ್ಟ್ ಪೋನ್ ಆಯ್ತು. ಈ ಸ್ಪೆಷಲ್ ಅರ್ಪಣೆ ಚಿರು ಅಣ್ಣನಿಗೆ ಧ್ರುವ ಅವರಿಂದ’ ಎಂದು ಒಳ್ಳೆ ಹುಡುಗ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

druva chiru

ಪ್ರಥಮ್ ಪೋಸ್ಟ್ ನೋಡಿದ ಬಳಿಕ ಅಭಿಮಾನಿಗಳು, ಅಣ್ಣ ಚಿರು ಮೇಲೆ ಧ್ರುವಾಗಿರುವ ಪ್ರೀತಿ ಕಂಡು ಫಿದಾ ಆಗಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

Live Tv
[brid partner=56869869 player=32851 video=960834 autoplay=true]

Share This Article