ಮೈಸೂರು: ಪಾಠ ಹೇಳುವ ಶಿಕ್ಷಕರೇ ತಮ್ಮ ಕಡೆಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಬೇಕೆಂದು ಆಗ್ರಹಿಸಿ ಕುಡಿದು ರಂಪಾಟ ಮಾಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ಪಟ್ಟಣದ ಜೆಎಸ್‍ಎಸ್ ಮಂಗಳ ಮಂಟಪದ ಮುಂಭಾಗ ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಕಡೆಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಹೆಮ್ಮರಗಾಲದ ಅಂಕಶೆಟ್ಟಿ, ಹೊನ್ನಬಿಡಿನ ಚೆಲುವಮೂರ್ತಿ ಎಂಬ ಇಬ್ಬರು ಶಿಕ್ಷಕರು ಕುಡಿದು ರಂಪಾಟ ಮಾಡಿದ್ದಾರೆ.
Advertisement
ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಆರ್‍ಸಿ ಅಧಿಕಾರಿಯಾಗಿರುವ ಕೆ.ಜೆ.ಮಹೇಶ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಾವು ಹೇಳಿದವರಿಗೆ ಪ್ರಶಸ್ತಿ ನೀಡಬೇಕು. ಇಲ್ಲದಿದ್ದರೆ ಚೆನ್ನಾಗಿರಲ್ಲ ಎಂದು ಬೆದರಿಕೆ ಹಾಕಿದ್ದಾರೆ.
Advertisement
ಸೆ. 5 ರಂದು ಇದೇ ಜೆಎಸ್‍ಎಸ್ ಮಂಗಳ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜನೆಗೊಂಡಿದ್ದ ಹಿನ್ನೆಲೆಯಲ್ಲಿ ಅದೇ ಸ್ಥಳಕ್ಕೆ ಗದ್ದಲ ನಡೆಸಿದ್ದಾರೆ. ಶಿಕ್ಷಕರ ರಂಪಾಟದ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ. ತಡವಾಗಿ ಕೆ.ಜೆ.ಮಹೇಶ್ ಅವರಿಗೆ ಈ ವಿಡಿಯೋ ಸಿಕ್ಕಿದೆ. ವಿಡಿಯೋ ಆಧಾರದ ಮೇಲೆ ಅವರು ಬಿಇಓಗೆ ಶಿಕ್ಷಕರ ವಿರುದ್ಧ ದೂರು ನೀಡಿದ್ದಾರೆ.