2023ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ಸಿನಿಮಾ ʻಜೈಲರ್ʼನಲ್ಲಿ (Jailer) ರಜನಿಕಾಂತ್ ಎದುರು ವಿಲನ್ ಆಗಿ ಅಬ್ಬರಿಸಿದ್ದ ಮಲಯಾಳಂ ನಟ ವಿನಾಯಕನ್ (Vinayakan) ಅವರನ್ನು ಅರೆಸ್ಟ್ ಮಾಡಲಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಠಪೂರ್ತಿ ಕುಡಿದಿದ್ದ ವಿನಾಯಕನ್, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
Reel life Villain #Vinayakan was detained by Police at RGIA #Airport in #Hyderabad for misbehaving with gate staff in a drunken state.
The ‘Jailer’ fame Malayalam actor Vinayakan was detained by the #RGIA Police on Saturday for allegedly misbehaving with the airport officials… pic.twitter.com/ODl1TAhiTb
— Surya Reddy (@jsuryareddy) September 7, 2024
Advertisement
ವಿನಾಯಕನ್ ಅವರು ಕೊಚ್ಚಿಯಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ (Hyderabad Airport) ಆಗಮಿಸಿದ್ದರು. ಅಲ್ಲಿ ಇಂಡಿಗೋ ಸಿಬ್ಬಂದಿ ಜೊತೆಗೆ ಮೊದಲು ಅನುಚಿತವಾಗಿ ವರ್ತಿಸಿದ್ದಾರೆ. ಅವರು ವಿಪರೀತ ಕುಡಿದಿದ್ದರಿಂದ ಮೈಮೇಲೆ ಅರಿವೇ ಇಲ್ಲದಂತೆ ನಡೆದುಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಅಲ್ಲದೇ ಪ್ರಯಾಣಿಕರೊಂದಿಗೂ ಅಸಭುವಾಗಿ ವರ್ತಿಸಿದ್ದಾರೆ. ಈ ಬಗ್ಗೆ ದೂರು ನೀಡಿದ ಬಳಿಕ ಏರ್‌ಪೋರ್ಟ್ ಸಿಐಎಸ್‌ಎಫ್ (CISF) ಭದ್ರತಾ ಸಿಬ್ಬಂದಿ ವಿನಾಯಕನ್ ಅವರನ್ನು ವಶಕ್ಕೆ ಪಡೆದು, ಸ್ಥಳೀಯ ಏರ್‌ಪೋರ್ಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
Advertisement
ಅರೆಬೆತ್ತಲಾಗಿ ಕುಳಿತಿದ್ದ ನಟ:
ವಿಮಾನ ನಿಲ್ದಾಣದಲ್ಲಿ ಧರಿಸಿದ್ದ ಶರ್ಟ್ ಬಿಚ್ಚಿ ಅರೆಬೆತ್ತಲಾಗಿ ಕುಳಿತಿದ್ದ ವಿನಾಯಕನ್ ಅವರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಏರ್‌ಪೋರ್ಟ್ ಪೊಲೀಸ್ ಠಾಣೆಯ ಸಿಐ ಬಾಲರಾಜ್, ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ
Advertisement
ಉತ್ತಮ ನಟ:
ಕಳೆದ 28 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ವಿನಾಯಕನ್ ಅವರು ಮಲಯಾಳಂನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ, ಉತ್ತಮ ನಟ ಎನಿಸಿಕೊಂಡಿದ್ದಾರೆ. ʻಜೈಲರ್ʼ ಸಿನಿಮಾದಲ್ಲಿ ರಜನಿಕಾಂತ್ ಎದುರು ಖಳನಾಗಿ ನಟಿಸಿದ ಮೇಲೆ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. 2016ರಲ್ಲಿ ತೆರೆಕಂಡ ಮಲಯಾಳಂನ ʻಕಮ್ಮಟ್ಟಿಪಾಡಂʼ ಸಿನಿಮಾದ ನಟನೆಗಾಗಿ ವಿನಾಯಕನ್‌ಗೆ ಭಾರೀ ಮೆಚ್ಚುಗೆ ಸಿಕ್ಕಿತ್ತು. ಅದಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ಇದನ್ನೂ ಓದಿ: ಸದ್ದು ಮಾಡುತ್ತಿದೆ ಅನೀಶ್, ಮಿಲನಾ ನಾಗರಾಜ್ ನಟನೆಯ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಪೋಸ್ಟರ್
ವಿವಾದಗಳಿಂದಲೇ ಫೇಮಸ್:
ನಟ ವಿನಾಯಕನ್ ಅವರ ವಿವಾದ ಇದೇ ಮೊದಲೇನಲ್ಲ. 2023ರ ಅಕ್ಟೋಬರ್‌ನಲ್ಲಿ ಮಲಯಾಳಂ ಕೇರಳದ ಎರ್ನಾಕುಲಂನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಬಂಧಿಸಲಾಗಿತ್ತು. 2022ರಲ್ಲಿ ಮೀಟೂ ಆಂದೋಲನದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದನ್ನೂ ಓದಿ: ಗುರುದತ್ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್
ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ವಿನಾಯಕನ್, ಸದ್ಯ ವಿಕ್ರಮ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ʻಧ್ರುವನಚ್ಚತ್ತಿರಂʼ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಬಳಿಕ ತೆಕ್ಕು ವಡಕ್ಕು, ಕರಿಂತಂದನ್ ಮಲಯಾಳಂ ಸಿನಿಮಾಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಕಾಲ್‌ಶೀಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಂಬಾನಿ ಮನೆಯ ಗಣೇಶ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್