ವಿಜಯಪುರ: ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯನೊಬ್ಬ ರಂಪಾಟ ಮಾಡಿರುವ ಘಟನೆ ಜಿಲ್ಲೆಯ ಚಡಚಣ (Chadachana) ತಾಲೂಕಿನ ಶಿರನಾಳ (Shiranala) ಆಯುಷ್ ಆರೋಗ್ಯ ಮಂದಿರದಲ್ಲಿ ನಡೆದಿದೆ.ಇದನ್ನೂ ಓದಿ: ಮುಡಾ, ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಮುಳುಗಿ ಹೋಗಿದೆ: ಜಗದೀಶ ಶೆಟ್ಟರ್
ಶಿರನಾಳ ಗ್ರಾಮದ ಆಯುಷ್ ಆರೋಗ್ಯ ಮಂದಿರದಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಫೀಸರ್ (Health Inspector Officer) ಹುದ್ದೆಯಲ್ಲಿರುವ ನಾರಾಯಣ ರಾಠೋಡ ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದಾನೆ. ಆಸ್ಪತ್ರೆಯ ಕಿಟಕಿ, ಗಾಜು ಪುಡಿ ಪುಡಿ ಮಾಡಿ ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯ ಟೇಬಲ್, ಕುರ್ಚಿಗಳೆಲ್ಲ ಪುಡಿಪುಡಿಯಾಗಿವೆ. ಅಷ್ಟಲ್ಲದೇ ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ಕೂಡ ನೀಡಿದ್ದಾನೆ. ವೈದ್ಯನ ಅವತಾರ ಕಂಡು ಗ್ರಾಮದ ಜನ ಹಿಡೀ ಶಾಪ ಹಾಕಿದ್ದಾರೆ.
Advertisement
Advertisement
ಕುಡಿತದ ಕಾರಣದಿಂದ ಮೂರು ತಿಂಗಳ ಹಿಂದೆ ನಾರಾಯಣ ರಾಠೋಡನನ್ನ ಅಮಾನತು ಮಾಡಲಾಗಿತ್ತು. ಬರಡೋಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾಗ ಮಹಿಳಾ ರೋಗಿಗಳು ಬಂದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆ ಅಮಾನತು ಮಾಡಲಾಗಿತ್ತು.ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು
Advertisement
Advertisement
ವಾರದ ಹಿಂದಷ್ಟೇ ಮತ್ತೇ ಕರ್ತವ್ಯಕ್ಕೆ ಹಾಜರಾಗಿದ್ದ ವೈದ್ಯ ಇದೀಗ ಮತ್ತೆ ಅದೇ ರೀತಿ ರಂಪಾಟ ಮಾಡಿದ್ದಾನೆ. ಸದ್ಯ ವೈದ್ಯನ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.