ಚಂಡೀಗಢ: ಕುಡಿದ (Drunk) ಮತ್ತಿನಲ್ಲಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ಅವರನ್ನ ಜರ್ಮನಿಯ ಲುಫ್ಥಾನ್ಸಾ ವಿಮಾನದಿಂದ (Lufthansa Flight) ಕೆಳಗಿಳಿಸಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಫ್ರಾಂಕ್‌ಫರ್ಟ್‌ನಿಂದ (Frankfurt) ದೆಹಲಿಗೆ (New Delhi) ಬರುತ್ತಿದ್ದ ವಿಮಾನ 4 ಗಂಟೆ 40 ನಿಮಿಷ ತಡವಾಗಲು ಭಗವಂತ್ ಮಾನ್ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
Advertisement
Disturbing media reports quoting co-passengers say Pb CM @BhagwantMann was deplaned from Lufthansa flight as he was too drunk to walk. And it led to a 4-hour flight delay. He missed AAP's national convention. These reports have embarrassed & shamed Punjabis all over the globe.1/2 pic.twitter.com/QxFN44IFAE
— Sukhbir Singh Badal (@officeofssbadal) September 19, 2022
Advertisement
ನಡೆದಿದ್ದು ಏನು?
ಪಂಜಾಬ್‌ಗೆ (Panjab) ಹಲವು ಹೂಡಿಕೆ ಆಕರ್ಷಿಸಲು ಮಾನ್ ಸೆಪ್ಟೆಂಬರ್ 11 ರಿಂದ 18ರ ವರೆಗೆ ಜರ್ಮನಿ ಪ್ರವಾಸ ಕೈಗೊಂಡಿದ್ದರು. ಅವರಿಂದು ಹಿಂದಿರುಗುವಾಗ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದರು. ಈ ಕಾರಣ ಅವರನ್ನು ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಬರುತ್ತಿದ್ದ ಲುಫ್ಥಾನ್ಸ 760 ವಿಮಾನದಿಂದ ಕೆಳಗಿಳಿಸಲಾಯಿತು. ಜರ್ಮನಿಯಿಂದ (Germany) ಮಧ್ಯಾಹ್ನ 1.40ಕ್ಕೆ ಟೇಕ್ ಆಫ್ ಆದ ವಿಮಾನವು (Flight) ಸಂಜೆ 5.30ಕ್ಕೆ ದೆಹಲಿಗೆ ಬಂದಿಳಿಯಿತು. ಮಾನ್ ಅವರ ವರ್ತನೆಯಿಂದಾಗಿ 4 ಗಂಟೆಗಳ ಕಾಲ ವಿಮಾನ ತಡವಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
A Big Shame!!
Punjab Chief Minister Bhagwant Mann deplaned because he was heavily Drunk pic.twitter.com/7PaPSiVDtb
— Delhi Congress (@INCDelhi) September 19, 2022
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ ಕಚೇರಿಯು (Panjab CM Office), ಮಾನ್ ಅವರು ಪಾನಮತ್ತರಾಗಿರಲಿಲ್ಲ, ಅವರಿಗೆ ಆರೋಗ್ಯ ಸಮಸ್ಯೆಯಿದ್ದ ಕಾರಣ ವಿಮಾನ ಹತ್ತಲು ಸಾಧ್ಯವಾಗಲಿಲ್ಲವೇ ಹೊರತು ಲುಪ್ಥಾನ್ಸ ಅವರನ್ನು ಹೊರಹಾಕಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ವಿರೋಧ ಪಕ್ಷಗಳು, ಭಗವಂತ್ ಮಾನ್ ಪಂಜಾಬಿಗಳು ನಾಚಿಕೆಪಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿವೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತುಂಬಾ ಕುಡಿದಿದ್ದರಿಂದ ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಅವರ ಸಹ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.’
ಇದರಿಂದ ವಿಮಾನ ನಾಲ್ಕು ಗಂಟೆ ವಿಳಂಬವಾಗಿದೆ. ಅಲ್ಲದೇ ಅವರು ಎಎಪಿಯ (AAP) ರಾಷ್ಟ್ರೀಯ ಸಮಾವೇಶಕ್ಕೂ ಗೈರಾಗಿದ್ದಾರೆ. ಈ ಬೆಳವಣಿಗೆಗಳು ಪಂಜಾಬ್ ಸರ್ಕಾರವನ್ನು ತೀವ್ರ ಮುಖಭಂಗಕ್ಕೀಡಾಗುವಂತೆ ಮಾಡಿವೆ. ಜೊತೆಗೆ ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡುವಂತಾಗಿದೆ. ಘಟನೆ ಬಗ್ಗೆ ಪಂಜಾಬ್ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಅಕಾಲಿ ದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದಾರೆ. ಒತ್ತಾಯಿಸಿದ್ದಾರೆ.
ಮಾನ್ ಅವರು ಅತಿಯಾಗಿ ಕುಡಿದಿದ್ದರು. ಅವರಿಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಅವರ ಪತ್ನಿ ಮತ್ತು ಭದ್ರತಾ ಸಿಬ್ಬಂದಿ ಅವರಿಗೆ ನೆರವಾಗುತ್ತಿದ್ದರು ಎಂಬ ಪ್ರಯಾಣಿಕರೊಬ್ಬರ ಹೇಳಿಕೆಯ ವರದಿಯನ್ನು ಕಾಂಗ್ರೆಸ್ ಟ್ವೀಟ್‌ನಲ್ಲಿ ಹಂಚಿಕೊಂಡಿದೆ.
ಈ ಕುರಿತು ಮಾತನಾಡಿರುವ ಎಎಪಿ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್, ಮುಖ್ಯಮಂತ್ರಿ ಅವರು ನಿಗದಿಯಂತೇ ಸೆಪ್ಟೆಂಬರ್ 19ರಂದು ಹಿಂತಿರುಗಿದ್ದಾರೆ. ಈ ಎಲ್ಲಾ ಸಾಮಾಜಿಕ ಮಾಧ್ಯಮ (Social Media) ವರದಿಗಳು ಕೇವಲ ಅಪಪ್ರಚಾರವಷ್ಟೇ. ಮಾನ್ ಅವರು ತಮ್ಮ ವಿದೇಶ ಪ್ರವಾಸದ ಮೂಲಕ ಒಂದಷ್ಟು ಹೂಡಿಕೆ ತರುತ್ತಿರುವುದನ್ನು ಕಂಡು ವಿರೋಧ ಪಕ್ಷಗಳು ಕಂಗಾಲಾಗಿವೆ. ಅಗತ್ಯವಿದ್ದವರು ಲುಪ್ಥಾನ್ಸ ಏರ್‌ಲೈನ್ಸ್ ಬಳಿ ಪರಿಶೀಲಿಸಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.