ವಾಷಿಂಗ್ಟನ್: ಮದ್ಯ ಕುಡಿಯದೇ ವ್ಯಕ್ತಿಯ ದೇಹದಲ್ಲಿ ಮದ್ಯ ಉತ್ಪಾದನೆಯಾಗುತ್ತಿರುವ ವಿಶೇಷ ಪ್ರಕರಣವೊಂದು ಅಮೆರಿಕದಲ್ಲಿ ಬೆಳಕಿಗೆ ಬಂದಿದೆ.
ಹೌದು. ಉತ್ತರ ಕರೋಲಿನಾದ ವ್ಯಕ್ತಿಯ ಕರುಳಿನಲ್ಲಿ ಮದ್ಯ ಉತ್ಪಾದನೆಯಾಗುತ್ತಿದೆ. ಅಲ್ಲದೆ ಆತನ ದೇಹದಲ್ಲಿನ ಎಲ್ಲ ಕಾರ್ಬೋಹೈಡ್ರೇಟ್‍ಗಳು ಬಿಯರ್ ಆಗಿ ಪರಿವರ್ತಿಸುವ ಶಿಲೀಂದ್ರವನ್ನು ಹೊಂದಿವೆ ಎಂಬ ಅಚ್ಚರಿಯ ವಿಚಾರ ಪತ್ತೆಯಾಗಿದೆ.
Advertisement
ಅಪರಿಚಿತನೊಬ್ಬ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ಆದರೆ ಆತ ಮದ್ಯ ಸೇಸಿರುವುದನ್ನು ನಿರಾಕರಿಸಿದ್ದಾನೆ. ನಂತರ ಮದ್ಯ ಪರೀಕ್ಷೆಗೆ ಒಳಪಡಲು ಆತ ನಿರಾಕರಿಸಿದ್ದು, ಆಗ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತನ ರಕ್ತದ ಆಲ್ಕೊಹಾಲ್ ಮಟ್ಟವು 200 ಮಿಲಿಗ್ರಾಂಎಂದು ತೋರಿಸಿದೆ. ಇದು 10 ಆಲ್ಕೊಹಾಲ್ ಯುಕ್ತ ಪಾನೀಯ ಕುಡಿದಿದ್ದಕ್ಕೆ ಸಮಾನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ಆಗ ವ್ಯಕ್ತಿ ವೈದ್ಯರಿಗೆ ಮಾಹಿತಿ ನೀಡಿದ್ದು, ಸುಮಾರು ಮೂರು ವರ್ಷಗಳಿಂದ ನಾನು ಖಿನ್ನತೆ, ಬ್ರೇನ್ ಫಾಗ್, ಮೆಮೊರಿ ಲಾಸ್ ಹಾಗೂ ವಿಚಿತ್ರ ನಡವಳಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ನನ್ನ ವ್ಯಕ್ತಿತ್ವ ಬದಲಾಗಿರುವುದನ್ನು ಅನುಭವಿಸಿದ್ದೇನೆ. ಬೆರಳಿಗೆ ಗಾಯವಾದಾಗ ಆ್ಯಂಟಿಬಯೋಟಿಕ್ಸ್ ಚಿಕಿತ್ಸೆ ಪಡೆದ ಒಂದು ವಾರದ ನಂತರ ಈ ರೀತಿಯ ಬದಲಾವಣೆಗಳು ಪ್ರಾರಂಭವಾಗಿವೆ ಎಂದು ಹೇಳಿದ್ದಾನೆ.
Advertisement
ಆತ ಮದ್ಯ ಸೇವನೆ ಮಾಡಿರುವುದನ್ನು ಪದೇ ಪದೆ ನಿರಾಕರಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ನಂಬಲಿಲ್ಲ. ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ ನಂತರ ಕುಟುಂಬಸ್ಥರು ಆತನ ಸ್ನೇಹಿತ ಮದ್ಯಪಾನಿಯಾಗಿದ್ದು ಹೀಗಾಗಿ ಕುಡಿಯಬಹುದು ಎಂದು ಶಂಕಿಸಿದ್ದಾರೆ.
ವೈದ್ಯರು ಪರೀಕ್ಷಿಸಿದಾಗ ಆತನ ದೇಹ ಸಾಮಾನ್ಯವಾಗಿರುವುದು ಕಂಡು ಬಂತು. ನಂತರ ದೇಹದಲ್ಲಿ ಸ್ಯಾಕರೊಮೈಸಿಸ್ ಸೆರೆವಿಸಿಯೆ ಇರುವುದು ಇರುವುದು ಕಂಡು ಬಂದಿದೆ. ಇದನ್ನು ಬ್ರೆವೆರ್ಸ್ ಯೀಸ್ಟ್ ಎಂದು ಸಹ ಕರೆಯುತ್ತಾರೆ.
ವ್ಯಕ್ತಿಯನ್ನು ಅಂತಿಮವಾಗಿ ನ್ಯೂಯಾರ್ಕ್‍ನ ರಿಚ್ಮಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ತಜ್ಞರ ಬಳಿ ಕರೆದೊಯ್ಯಲಾಯಿತು. ಆಗ ಆಟೋ-ಬ್ರಿವೆರಿ ಸಿಂಡ್ರೋಮ್(ಎಬಿಎಸ್) ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನುವ ವಿಚಾರ ಪತ್ತೆಯಾಗಿದೆ. ಎಬಿಎಸ್ ರೋಗ ಇರುವುದು ಖಚಿತವಾದ ನಂತರ ಓಹಿಯೋ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ನಂತರ ಅವನ ದೇಹ ಸ್ವಲ್ಪ ಸುಧಾರಣೆಯಾಗಿದೆ ಎಂದು ವರದಿಯಾಗಿದೆ.
ಈ ರೋಗ ಅಪರೂಪದಲ್ಲಿ ಅಪರೂಪ ಜನರಿಗೆ ಬರುತ್ತದೆ. ಕಳೆದ 30 ವರ್ಷಗಳಲ್ಲಿ ವಿಶ್ವದಲ್ಲಿ ಕೇವಲ 5 ಜನರಲ್ಲಿ ಮಾತ್ರ ಕಾಣಿಸಿಕೊಂಡಿದೆ.