ಗದಗ: ಕುಡಿದ ಮತ್ತಲ್ಲಿ ನಗರದಲ್ಲಿ ಚಾಕು ಇರಿತ, ಗಲಾಟೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಡುಕರಿಗೆ ಎಸ್‌ಪಿ ಚಳಿ ಬಿಡಿಸಿದ ಘಟನೆ ಗದಗ್‌ನಲ್ಲಿ (Gadag) ನಡೆದಿದೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ಡ್ರಿಂಕ್ & ಡ್ರೈವ್ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಯಿತು.
ಹೊಸ ಬಸ್ ನಿಲ್ದಾಣ, ಓಲ್ಡ್ ಡಿಸಿ ಆಫೀಸ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮುಳಗುಂದ ನಾಕಾ, ಬೆಟಗೇರಿ ಬಸ್ ನಿಲ್ದಾಣ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಎಸ್‌ಪಿ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಸೈಫ್ ಮೇಲೆ ಹಲ್ಲೆ: ಅಂತಾರಾಷ್ಟ್ರೀಯ ಪಿತೂರಿ ಶಂಕೆಯನ್ನು ತಳ್ಳಿಹಾಕುವಂತಿಲ್ಲ – ಆರೋಪಿ 5 ದಿನ ಪೊಲೀಸ್ ಕಸ್ಟಡಿಗೆ
ರಾತ್ರೋರಾತ್ರಿ ದಿಢೀರ್ ಎಸ್‌ಪಿ ಹಾಗೂ ಅನೇಕ ಪೊಲೀಸ್ ಅಧಿಕಾರಿಗಳು ಡ್ರೈವಿಂಗ್ ಮಾಡುವವರನ್ನು ತಡೆದು ತಪಾಸಣೆ ಮಾಡಿದರು. ಪಾನ ಮತ್ತರಾದವರಿಗೆ ದಂಡ ವಿಧಿಸುವುದರ ಮೂಲಕ ನಶೆ ಇಳಿಸುವ ಕೆಲಸ ಮಾಡಿದರು. ಈ ವೇಳೆ ಪ್ರಬಾರಿ ಎಸ್.ಪಿ, ಡಿವೈಎಸ್ಪಿ, ಸಿಪಿಐ ಸೇರಿದಂತೆ ಅನೇಕ ಸಿಬ್ಬಂದಿ ಇದ್ದರು.