ಮಳೆಗಾಲ ಆರಂಭ ಆದ್ರೆ ಸಾಕು ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳು ಆರಂಭ ಆಗ್ತಾವೆ.. ಇದರ ವಿರುದ್ಧ ಹೋರಾಡೋಕೆ ನಾವು ತಯಾರಾಗಬೇಕು. ಅದಕ್ಕಾಗಿ ಆರೋಗ್ಯ (Health) ವೃದ್ಧಿಸುವ ಆಹಾರ ಸೇವಿಸಬೇಕು. ಇವತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆಕಾಯಿ ಸೂಪ್ (Drumstick Soup) ಮಾಡೋದು ಹೇಗೆ ಅಂತ ಹೇಳ್ಕೊಡ್ತಿನಿ. ನೀವು ಮಾಡ್ನೋಡಿ..
ಬೇಕಾಗುವ ವಸ್ತುಗಳು
- ನುಗ್ಗೆಕಾಯಿ 4-5
- ಈರುಳ್ಳಿ,
- ಟೊಮ್ಯಾಟೊ
- ಕೋಸುಗಡ್ಡೆ (ಅರ್ಧ)
- ಬೆಳ್ಳುಳ್ಳಿ
- ಶುಂಠಿ
- ಉಪ್ಪು
- ಅರಿಶಿನಪುಡಿ
- ಜೀರಿಗೆ
- ತುಪ್ಪ
ನುಗ್ಗೆಕಾಯಿ ಸೂಪ್ ತಯಾರಿಸುವುದು ಹೇಗೆ ?
ಮೊದಲು ನುಗ್ಗೆಕಾಯಿಯನ್ನು ಸ್ವಚ್ಛವಾಗಿ ತೊಳೆದು ಕತ್ತರಿಸಿಟ್ಟುಕೊಳ್ಳಬೇಕು. ಬಳಿಕ ಈರುಳ್ಳಿ, ಟೊಮ್ಯಾಟೊ, ಕೋಸುಗಡ್ಡೆ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕತ್ತರಿಸಿ ಸೇರಿಸಿ, ಬೇಕಾದಷ್ಟು ನೀರು ಹಾಕಿ ಪ್ರೆಶರ್ ಕುಕ್ಕರ್‌ನಲ್ಲಿ ಇಡಬೇಕು.
ನಂತರ ಉಪ್ಪು, ಅರಿಶಿನ ಪುಡಿ ಮತ್ತು ಜೀರಿಗೆ ಸೇರಿಸಿ. ಪ್ರಶರ್ ಕುಕ್ಕರ್ ಸುಮಾರು 5 ವಿಷಲ್ ಹಾಕಿದ ನಂತರ ಅದನ್ನು ತಣ್ಣಗಾಗಲು ಬಿಡಬೇಕು. ನಂತರ ಕುಕ್ಕರ್‌ನಿಂದ ನುಗ್ಗೆಕಾಯಿ ಪೀಸ್‌ಗಳನ್ನು ತೆಗೆದು, ಅದನ್ನು ಚಮಚದಿಂದ ಕಲಿಸಬೇಕು. ನಂತರ ನುಗ್ಗೆಕಾಯಿಗಳನ್ನು ಮತ್ತೆ ಆ ಮಿಶ್ರಣಕ್ಕೆ ಸೇರಿಸಿ ಕುದಿಸಬೇಕು.
ನಂತರ, ತುಪ್ಪ, ಜೀರಿಗೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಹಾಕಬೇಕು. ಈಗ ನುಗ್ಗೆ ಕಾಯಿ ಸೂಪ್ ಸವಿಯಲು ಸಿದ್ಧ! ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಸೂಪ್ ತುಂಬಾ ಸಹಕಾರಿಯಾಗಿದೆ.