ಬೆಂಗಳೂರು: ನಗರದಲ್ಲಿ (Bengaluru) ಸಿಸಿಬಿ (CCB) ಪೊಲೀಸರು ದಾಳಿ ನಡೆಸಿ 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸೀಜ್ ಮಾಡಿದ್ದಾರೆ.
ಸಿಸಿಬಿ ಮಾದಕವಸ್ತು ನಿಗ್ರಹದಳ ಪೆಡ್ಲರ್‌ಗಳ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ಈ ಹಿಂದೆ ಈಗಲ್ ಟನ್ ರೆಸಾರ್ಟ್‌ನಲ್ಲಿ ಅರೆಸ್ಟ್ ಆಗಿದ್ದ ಪೆಡ್ಲರ್‌ನಿಂದ 3.5 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, 1.5 ಕೋಟಿ ರೂ. ಮೌಲ್ಯದ ಸುಮಾರು 1ಕೆಜಿ ಎಂಡಿಎಂಎ ಹಾಗೂ 30 ಲಕ್ಷ ರೂ. ನಗದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಕುಡಚಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ್ ಹೃದಯಾಘಾತದಿಂದ ಸಾವು
ಅಧಿಕಾರಿಗಳು ಮಾದಕವಸ್ತು ಜಪ್ತಿ ಮಾಡಿ, ನಗರದ ಹಲವು ಕಾಲೇಜು ವಿದ್ಯಾರ್ಥಿಗಳ ಕೈ ಸೇರುವುದನ್ನು ತಪ್ಪಿಸಿದ್ದಾರೆ. ಈ ಸಂಬಂಧ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು