ತಿರುವನಂತಪುರಂ: ಕೇರಳದ ಆಲುವಾ ರೈಲು ನಿಲ್ದಾಣದಲ್ಲಿ 2.5ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಆಲುವಾ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಇಬ್ಬರು, ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದರು. ಎಕ್ಸ್‍ಟಸಿ ಅಥವಾ ಎಂಡಿಎಂಎ ಎನ್ನಲಾಗುವ 3ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿ 7 ವರ್ಷಗಳ ಬಳಿಕ ಪತಿಯನ್ನು ಸೇರಿದ ಪತ್ನಿ!
Advertisement
Advertisement
ರಾಹುಲ್ ಸುಭಾಷ್(28) ಹಾಗೂ ಸೈನುಲ್(19) ಬಂಧಿತ ಆರೋಪಿಗಳು. ಇವರು ಹೊಸ ವರ್ಷಾಚರಣೆಗೆ ಮಾದಕ ದ್ರವ್ಯವನ್ನು ಸಾಗಿಸುತ್ತಿರುವುದಾಗಿ ಹೇಳುವ ಮೂಲಕ ಪೊಲೀಸರ ಬಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
Advertisement
ಪಾನಿಪುರಿ ಹಾಗೂ ಜ್ಯೂಸ್ ಪ್ಯಾಕೆಟ್ ಗಳಲ್ಲಿ ಮಾದಕ ವಸ್ತುಗಳನ್ನು ಬಚ್ಚಿಟ್ಟಿದ್ದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಆರೋಪಿಗಳು ದೆಹಲಿಯಿಂದ ಕೇರಳಕ್ಕೆ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಂಧೆಯಿಂದ ಮಗಳನ್ನು ರಕ್ಷಿಸುವಂತೆ ವಿಎಚ್‌ಪಿಗೆ ತಾಯಿ ಪತ್ರ – ಆರೋಪಿ ಅರೆಸ್ಟ್
Advertisement
ಕಳೆದ ಕೆಲವು ತಿಂಗಳುಗಳಿಂದ ಇಬ್ಬರು ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದು, ಅವರ ಮೇಲೆ ಪೊಲೀಸರು ಮೊದಲೇ ನಿಗಾ ಇಟ್ಟಿದ್ದರು. ಖಚಿತ ಮಾಹಿತಿಯ ಬಳಿಕ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.