ತಿರುವನಂತನಪುರಂ: 12,000 ಕೋಟಿ ರೂ. ಮೌಲ್ಯದ ಸುಮಾರು 2,500 ಕೆಜಿ ಮೆಥಾಂಫೆಟಮೈನ್ ಎಂಬ ಮಾದಕ ವಸ್ತುವನ್ನು ನೌಕಾಪಡೆ (Navy) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.
Advertisement
ಕೇರಳ (Kerala), ಕರಾವಳಿಯಲ್ಲಿ ಹಡಗಿನ ಮೂಲಕ ಸಾಗಿಸುತ್ತಿದ್ದ ಪಾಕ್ (Pakistan) ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಇದು ದೇಶದಲ್ಲಿ ವಶಪಡಿಸಿಕೊಳ್ಳಲಾದ ಅತಿ ಹೆಚ್ಚು ಪ್ರಮಾಣದ ಮೆಥಾಂಫೆಟಮೈನ್ ಆಗಿದೆ. ಸಾಗರ ಮಾರ್ಗವಾಗಿ ನಡೆಯುವ ಕಳ್ಳಸಾಗಾಣಿಕೆಯ ಗುರಿಯಾಗಿಸಿ ನಡೆಸುವ `ಅಪರೇಷನ್ ಸಮುದ್ರಗುಪ್ತ್’ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: CBI ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಹೆಸರು
Advertisement
Advertisement
ಕರಾವಳಿಯಲ್ಲಿ ಸಾಗುತ್ತಿದ್ದ ಹಡಗನ್ನು ತಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 134 ಚೀಲಗಳಲ್ಲಿ ಮೆಥಾಂಫೆಟಮೈನ್‍ನನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ವಶ ಪಡಿಸಿಕೊಂಡ ಡ್ರಗ್ಸ್ ಹಾಗೂ ಆರೋಪಿಯನ್ನು ಎನ್‍ಸಿಬಿಯ ವಶದಲ್ಲಿರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕಳೆದ ಒಂದೂವರೆ ವರ್ಷದಲ್ಲಿ ದಕ್ಷಿಣ ಭಾಗದ ಸಮುದ್ರದ ಮೂಲಕ ಸಾಗಣಿಕೆಯಾಗುವ ಮಾದಕ ವಸ್ತುಗಳ ವಶಪಡಿಸಿಕೊಂಡಿರುವ ಪ್ರಕರಣದಲ್ಲಿ ಇದು ಮೂರನೇ ಪ್ರಕರಣವಾಗಿದೆ. ಇತ್ತೀಚೆಗೆ 500 ಕೆ.ಜಿ ಹೆರಾಯಿನ್ ಮತ್ತು 529 ಕೆ.ಜಿ ಹಶಿಶ್‍ನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮಾದಕವಸ್ತುಗಳು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ (Afghanistan) ಮೂಲಕ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 2024ರ ಹೊತ್ತಿಗೆ ಬಿಜೆಪಿ ಅಂತ್ಯ ಶುರು: ಮಮತಾ ಬ್ಯಾನರ್ಜಿ