ಚುನಾವಣಾ ಅಕ್ರಮಕ್ಕೆ ಆಯೋಗ ಕೊಕ್ಕೆ – 8,889 ಕೋಟಿ ಮೌಲ್ಯದ ನಗದು, ಡ್ರಗ್ಸ್‌, ಮದ್ಯ ಜಪ್ತಿ!

Public TV
2 Min Read
Money

ನವದೆಹಲಿ: ಲೋಕಸಭಾ ಚುನಾವಣೆ (Lok Sabha Elections) ಘೋಷಣೆಯಾದ ದಿನದಿಂದ ಈವೆರೆಗೆ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್‌, ಉಚಿತ ಉಡುಗೊರೆ ಸೇರಿದಂತೆ ಸರಿಸುಮಾರು 9,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಭಾರತೀಯ ಚುನಾವಣಾ ಆಯೋಗ (Election Commission Of India) ವಶಪಡಿಸಿಕೊಂಡಿದೆ ಎಂದು ಶನಿವಾರ ತಿಳಿಸಿದೆ.

ECI 2

ಮಾರ್ಚ್‌ 1 ರಿಂದ ಈವರೆಗೆ ವಶಪಡಿಸಿಕೊಂಡ ವಸ್ತುಗಳ ಒಟ್ಟಾರೆ ವಿವರವನ್ನು ಚುನಾವಣಾ ಆಯೋಗ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ. 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಸಹ ಆಯೋಗ ತಿಳಿಸಿದೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ ʼವಿಶೇಷ ಸೌಲಭ್ಯʼ ನೀಡಲಾಗಿದೆ ಅಂತ ಜನ ಮಾತನಾಡ್ತಿದ್ದಾರೆ: ಜಾಮೀನು ಬಗ್ಗೆ ಅಮಿತ್‌ ಶಾ ಮಾತು

2019ರ ಲೋಕಸಭಾ ಚುನಾವಣೆ ವೇಳೆ ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದ್ರೆ ಈ ಬಾರಿ ಇನ್ನೂ 3 ಹಂತದ ಚುನಾವಣೆಗಳು ಬಾಕಿಯಿರುವಂತೆಯೇ ಹಿಂದಿನ ದಾಖಲೆ ಮುರಿದಿದೆ. ಇದನ್ನೂ ಓದಿ: ನಾನು, ರಾಹುಲ್‌ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಲಾಭವಾಗ್ತಿತ್ತು – ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ

ECI

ಒಟ್ಟಾರೆ ದೇಶಾದ್ಯಂತ ಏಜೆನ್ಸಿಗಳು 8,889 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿವೆ. ಈ ಪೂಕಿ ಡ್ರಗ್ಸ್‌ ಪಾಲು 45%, ಅಂದ್ರೆ ಸುಮಾರು 3,958 ಕೋಟಿ ರೂ.ಗಳಷ್ಟಿದೆ. 849.15 ಕೋಟಿ ರೂ. ನಗದು, 814.85 ಕೋಟಿ ರೂ. ಮೌಲ್ಯದ 5.39 ಕೋಟಿ ಲೀಟರ್‌ ಮದ್ಯ, 1,200.33 ಕೋಟಿ ರೂ. ಮೌಲ್ಯದ ಲೋಹಗಳು, 2,006.56 ಕೋಟಿ ರೂ. ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದೆ.

ಗುಜರಾತ್‌ನಲ್ಲೇ ಅತಿ ಹೆಚ್ಚು ಮೌಲ್ಯದ ವಸ್ತುಗಳು ಸೀಜ್‌:
ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಯೋಗ ವಶಪಡಿಸಿಕೊಂಡ ವಸ್ತುಗಳ ಪೈಕಿ ಗುಜರಾತ್‌ನ ಪಾಲು ಹೆಚ್ಚಿನದ್ದಾಗಿದೆ. ಗುಜರಾತ್‌ ರಾಜ್ಯವೊಂದರಲ್ಲೇ ಒಟ್ಟು 1,461.73 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 892 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಒಳಗೊಂಡಿದೆ ಎಂದು ಆಯೋಗ ಮಾಹಿತಿ ನೀಡಿದೆ. ಇದನ್ನೂ ಓದಿ: 2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ

ಮತ್ತೊಂದು ಹೇಳಿಕೆಯಲ್ಲಿ ಮಾಹಿತಿ ನೀಡಿದ ಆಯೋಗವು, ದೇಶಾದ್ಯಂತ ಮಾದರಿ ನೀತಿ ಸಂಹಿತಿ ಉಲ್ಲಂಘಟನೆ ಸಂಬಂಧ ಒಟ್ಟು 4.24 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 4,23,908 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, 409 ದೂರುಗಳು ಪ್ರಗತಿಯಲ್ಲಿವೆ. ಸ್ವೀಕರಿಸಲಾದ ಒಟ್ಟು ದೂರಿನಲ್ಲಿ ಶೇ.89 ದೂರುಗಳಿಗೆ 100 ನಿಮಿಷಗಳ ಕಾಲಮಿತಿಯಲ್ಲೇ ಪರಿಹಾರ ಒದಗಿಸಲಾಗಿದೆ ಎಂದು ಆಯೋಗ ವಿವರಿಸಿದೆ.

Share This Article