ಸಿನಿಮಾ ರಂಗದಲ್ಲಿ ಡ್ರಗ್ಸ್ (Drugs) ಹಾವಳಿ ಹೆಚ್ಚಾಗಿದೆ ಎಂದು ಪದೇ ಪದೇ ಪೊಲೀಸ್ ಇಲಾಖೆ ಹೇಳುತ್ತಲೇ ಇದೆ. ಭಾರತೀಯ ಸಿನಿಮಾ ರಂಗವು ಡ್ರಗ್ಸ್ ಹಾವಳಿಯಿಂದ ಮುಕ್ತವಾಗಿಸಲು ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾರೆ ಪೊಲೀಸರು. ಹಾಗಾಗಿ ಕನ್ನಡವೂ ಸೇರಿದಂತೆ ಹಲವು ಚಿತ್ರರಂಗದ ನಟ ನಟಿಯರನ್ನು ಬಂಧಿಸಿಯೂ (Arrest) ಆಗಿದೆ. ಈಗ ತೆಲುಗಿನಲ್ಲಿ ನಟನೊಬ್ಬನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿನಿಮಾ ಚೂಪಿಸ್ತ ಮಾವ, ಕುಮಾರಿ 21 ಎಫ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಯುವ ನಟ ರಾಜ್ ತರುಣ್ (Raj Tarun) ಅವರ ಪ್ರೇಯಸಿಯನ್ನು ಈ ಬಾರಿ ತೆಲಂಗಾಣ (Telangana) ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಹೆಸರೂ ಕೂಡ ಬಹಿರಂಗ ಪಡಿಸಿಲ್ಲ.
ಗೋವಾದಿಂದ ಇವರಿಗೆಲ್ಲ ಡ್ರಗ್ಸ್ ಸರಬರಾಜು ಆಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಯುವತಿಯನ್ನು ಬಂಧಿಸಿದ ನಂತರ, ಯಾರಿಗೆಲ್ಲ ಡ್ರಗ್ಸ್ ಸರಬರಾಜು ಆಗುತ್ತಿತ್ತು, ಯಾರು ತಂದು ಕೊಡುತ್ತಿದ್ದರು. ಹೀಗೆ ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.