ಬೆಂಗಳೂರು: ಮಾದಕ ವಸ್ತು ನಿಯಂತ್ರಣ ಘಟಕ (NCB) ಅಧಿಕಾರಿಗಳ ಮತ್ತೊಂದು ಮೆಗಾ ಕಾರ್ಯಾಚರಣೆ ನಡೆದಿದ್ದು, ದೇವರ ಪ್ರಸಾದದ ಹೆಸರಿನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವುದು ಬಯಲಾಗಿದೆ.
ಡ್ರಗ್ಸ್ ಸಾಗಾಟದಲ್ಲಿ ತೊಡಗಿದ್ದ ಬಹ್ರೇನ್ ಮಾಜಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಈತ ಬ್ರಹ್ಮ ರಸಾಯಣ, ನರಸಿಂಹ ರಸಾಯಣ, ಅಶ್ವ ಗಂಧಿ ಲೇಹಂ, ಚಾಯಾ ವಧನ ಲೇಹ ಹೆಸರಲ್ಲಿ ಕೇರಳದಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ಆರೋಪಿಯಿಂದ 3.5 ಕೆ.ಜಿ. ಹಶೀಷ್ ಆಯಿಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್
ಮತ್ತೊಂದು ಕಾರ್ಯಾಚರಣೆ:
ಆಸ್ಟ್ರೇಲಿಯಾಗೆ 19 ಕೆಜಿ ಸೆಡೋಪೆಡ್ರಿನ್ ಸಾಗಾಟ ಮಾಡಲು ಯತ್ನಿಸಿದ ಪ್ರಕರಣ ಎನ್ ಸಿಬಿ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ. ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪಿಯನ್ನು ಎನ್‍ಸಿಬಿ ಅಧಿಕಾರಿಗಳು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಕರೈಕಾಲ್ ಎಂಬ ಕೊರಿಯರ್ ಕಂಪನಿ ಮೂಲಕ ಸಾಗಾಟ ಮಾಡಲು ಯತ್ನಿಸಲಾಗಿತ್ತು. ಇದನ್ನೂ ಓದಿ: ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!
ಇತ್ತ ಚೆನ್ನೈ, ಎರ್ನಾಕುಲಂ ಏರ್ ಪೋರ್ಟ್ ನಲ್ಲಿಯೂ ಡ್ರಗ್ಸ್ ಸೀಜ್ ಮಾಡಲಾಗಿದೆ. ಹೀಗೆ ಒಂದೇ ವಾರದಲ್ಲಿ ಮೂರು ಕಡೆ ಎನ್‍ಸಿಬಿ ಭರ್ಜರಿ ಕಾರ್ಯಾಚರಣೆಯ ಮೂಲಕ ಡ್ರಗ್ಸ್ ಸೀಜ್ ಮಾಡಿದೆ. ಇದನ್ನೂ ಓದಿ: ಶಾರೂಖ್ ಪುತ್ರನ ಲೆನ್ಸ್ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!