ದೊಡ್ಮನೆಯಲ್ಲಿ ಮನೆಯಲ್ಲಿ (Bigg Boss Kannada 10) ಈಗಾಗಲೇ 5 ವಾರಗಳು ಕಳೆದಿವೆ. ಇಷ್ಟು ವಾರಗಳಲ್ಲಿ ಒಂದು ವಾರ ಮಾತ್ರ ಕಿಚ್ಚ ಸುದೀಪ್ ಅವರು ಬಳೆಗೆ ಚಪ್ಪಾಳೆ ನೀಡಿದ್ದರು. ಆದರೆ ಈಗ ವಾರ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್‌ಗೆ ಚಪ್ಪಾಳೆ ನೀಡಿದ್ದಾರೆ. ಪ್ರತಾಪ್ ಆಟಕ್ಕೆ ಭೇಷ್ ಎಂದಿದ್ದಾರೆ. ಇದನ್ನೂ ಓದಿ:ಶಾರುಖ್ ಅಭಿಮಾನಿಗಳಿಗೆ ಗಿಫ್ಟ್ : ದೀಪಾವಳಿಗೆ ‘ಡಂಕಿ’ ಹೊಸ ಪೋಸ್ಟರ್

ಹೊರಗಡೆ ನನ್ನ ಕಳ್ಳ, ಸುಳ್ಳ ಅಂದವರು, ಹೀಯಾಳಿಸಿದವರು, ಈ ಮನೆಯಲ್ಲಿ ಆರಂಭದಲ್ಲಿ ಆದಂತಹ ಘಟನೆಗಳನ್ನು ನೆನಪಿಸಿಕೊಂಡರೆ ಈಗ ಮನಸ್ಸು ಹಗುರವಾಗುತ್ತಿದೆ. ಥ್ಯಾಂಕ್ಯು ಸರ್. ಬಿಗ್ ಬಾಸ್ ಮನೆಯಲ್ಲಿ ಹೊರಗಡೆ ಇದ್ದಾಗ ಎರಡು ಸೈಡ್ ಕಾಣಿಸಲ್ಲ. ಹೌದು, ನಾನು ತಪ್ಪು ಮಾಡಿದ್ದೇನೆ, ಅದನ್ನು ನಾನು ಒಪ್ಪುತ್ತೇನೆ. ಆದರೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಶ್ನಿಸೋದು ಸರಿ ಅಲ್ಲ. ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾ ಇರುತ್ತದೆ, ಅದು ಎಲ್ಲರಿಗೂ ಕಾಣುತ್ತದೆ ಎಂದು ಪ್ರತಾಪ್ ಅವರು ಕಿಚ್ಚ ಸುದೀಪ್‌ಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಪ್ರಪಂಚಕ್ಕೆ ನೀವು ಸುಳ್ಳು ಹೇಳಿರಬಹುದು, ಜನರಿಗೆ ಏನೇ ಹೇಳಿರಬಹುದು. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಪ್ರತಾಪ್ ಮಾತಿಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.


