ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮವೊಂದರಲ್ಲಿ ಅಪಾರ ಶಸ್ತ್ರಾಸ್ತ್ರ ಮತ್ತು 35,000 ರೂ. ನಗದು ಒಳಗೊಂಡ ಎರಡು ಡ್ರೋನ್ (Drone) ಡ್ರಾಪ್ ಪ್ಯಾಕೆಟ್‍ಗಳನ್ನು ಸೇನೆ (Indian Army) ವಶಪಡಿಸಿಕೊಂಡಿದೆ.
ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ತಲುಪಿಸಲು ಪಾಕಿಸ್ತಾನಿ (Pakistan) ಡ್ರೋನ್‍ಗಳು ಈ ಪ್ಯಾಕೆಟ್‍ಗಳನ್ನು ಬೀಳಿಸಿವೆ ಎಂಬ ಶಂಕೆ ಇದೆ. ಖೌರ್ ಪ್ರದೇಶದ ಚನ್ನಿ ದೇವಾನೊ ಗ್ರಾಮದ ಬಯಲು ಪ್ರದೇಶದಲ್ಲಿ ಈ ಪ್ಯಾಕೆಟ್‍ಗಳು ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸೇನೆ ಮತ್ತು ಪೊಲೀಸರು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಪ್ಯಾಕೆಟ್‍ಗಳನ್ನು ತೆರೆದಾಗ ಶಸ್ತ್ರಾಸ್ತ್ರ ಮತ್ತು ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ದಾಳಿ; ಮೂವರು ನಾಗರಿಕರ ಹತ್ಯೆ – 2 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತ
Advertisement
Advertisement
ಪ್ಯಾಕೆಟ್‍ನಲ್ಲಿ 9 ಎಂಎಂ ಇಟಾಲಿಯನ್ ನಿರ್ಮಿತ ಪಿಸ್ತೂಲ್, ಮೂರು ಮ್ಯಾಗಜೀನ್‍ಗಳು, 30 ರೌಂಡ್‍ಗಳು, ಮೂರು ಸುಧಾರಿತ ಸ್ಫೋಟಕ ಸಾಧನಗಳು, ಮೂರು ಐಇಡಿ ಬ್ಯಾಟರಿಗಳು, ಹ್ಯಾಂಡ್ ಗ್ರೆನೇಡ್ ಮತ್ತು 35,000 ರೂ. ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಶನಿವಾರ ಮುಂಜಾನೆ ಇದೇ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆಯನ್ನು ಸೇನೆ ತಡೆದಿತ್ತು. ಈ ವೇಳೆ ಸೇನೆಯ ದಾಳಿಗೆ ಓರ್ವ ಉಗ್ರ ಸಹ ಸಾವನ್ನಪ್ಪಿದ್ದ. ಇದನ್ನೂ ಓದಿ: ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ – ದೇಹವನ್ನು ಪಾಕ್ ಕಡೆಗೆ ಎಳೆದೊಯ್ದ ಸಹಚರರು